Home ಟಾಪ್ ಸುದ್ದಿಗಳು ಸಿಎಂ ಭೇಟಿಯಾದ ಮೌಲಾನ ಶಾಫಿ ಸ’ಅದಿ I ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೆರವಿನ ಭರವಸೆ

ಸಿಎಂ ಭೇಟಿಯಾದ ಮೌಲಾನ ಶಾಫಿ ಸ’ಅದಿ I ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೆರವಿನ ಭರವಸೆ

ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮೌಲಾನ ಶಾಫಿ ಸ’ಅದಿ ಅವರು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಚರ್ಚಿಸಿದರು.


ವಕ್ಫ್ ಹಾಗೂ ಹಜ್ಜ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಇದೇ ಸಂದರ್ಭ ಉಪಸ್ಥಿತರಿದ್ದು, ವಕ್ಫ್ ಆಸ್ತಿಯ ಅಭಿವೃದ್ಧಿಗಾಗಿ 300 ಕೋಟಿ ರೂ. ಅನುದಾನ ಒದಗಿಸುವಂತೆ ವಕ್ಫ್ ಮಂಡಳಿ ಅಧ್ಯಕ್ಷರು ಮನವಿ ಮಾಡಿದರು.


ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಮುಸ್ಲಿಂ ಸಮುದಾಯ ಹಾಗೂ ವಕ್ಫ್ ಅಭಿವೃದ್ಧಿಗಾಗಿ ಅಗತ್ಯ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮೌಲಾನ ಶಾಫಿ ಸ’ಅದಿ ಮಾಹಿತಿ ನೀಡಿದ್ದಾರೆ.‌

Join Whatsapp
Exit mobile version