ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ಭಾರಿ ಮಳೆಯಿಂದಾಗಿ ರದ್ದಾಗಿದೆ.
ಈ ಮೂಲಕ ಐಪಿಎಲ್ ನಲ್ಲಿ ಎರಡನೇ ಪಂದ್ಯ ರದ್ದಾಂತಾಗಿದೆ. ಹಿಂದೆ ಗುಜರಾತ್ ಮತ್ತು ಕೋಲ್ಕತಾ ನಡುವಿನ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿ 12 ಅಂಕ ಹೊಂದಿರುವ ಗುಜರಾತ್ ಅಧಿಕೃತವಾಗಿ ಹೊರ ಬಿದ್ದಿತ್ತು
ಇಂದಿನ1 ಅಂಕ ಸೇರಿ 15 ಅಂಕ ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಕಷ್ಟಪಡದೇ 2024ನೇ ಆವೃತ್ತಿಯ ಐಪಿಎಲ್ನ ಪ್ಲೇಆಫ್ಗೆ ಪ್ರವೇಶಿಸಿದೆ. ಕೋಲ್ಕತಾ ಮತ್ತು ರಾಜಸ್ಥಾನದ ನಂತರ ಐಪಿಎಲ್ 2024 ರ ಪ್ಲೇಆಫ್ಗೆ ಅರ್ಹತೆ ಪಡೆದ ಮೂರನೇ ತಂಡ ಎಂಬ ಹೆಗ್ಗಳಿಕೆಗೂ ಎಸ್ಆರ್ಎಚ್ ಪಾತ್ರವಾಯಿತು. 2020ರ ಬಳಿಕ ಇದೇ ಮೊದಲ ಬಾರಿಗೆ ಸನ್ರೈಸರ್ಸ್ ಪ್ಲೇ ಆಫ್ ಹಂತ ತಲುಪಿದೆ.
ಕ್ರೀಡಾಂಗಣದಲ್ಲಿ ತವರು ತಂಡವನ್ನು ಹುರಿದುಂಬಿಸಲು ದೊಡ್ಡ ಪ್ರಮಾಣದ ಪ್ರೇಕ್ಷಕರು ಇದ್ದರು. ಎಸ್ಆರ್ಎಚ್ ಪ್ಲೇಆಫ್ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳಿಗಾಗಿ ಲಘು ಪ್ರದರ್ಶನ ಮತ್ತು ಸಂಗೀತ ಆಯೋಜಿಸಲಾಗಿತ್ತು.
2022 ರಲ್ಲಿ ಪ್ರಶಸ್ತಿ ಗೆದ್ದ ಮತ್ತು 2022 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಗುಜರಾತ್ಗೆ ಈ ಐಪಿಲ್ ನಿರಾಶಾದಾಯವಾಗಿ ಪರಿಣಮಿಸಿದೆ. ಮಳೆಯಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಗುಜರಾತ್ ತನ್ನ ಋತುವನ್ನು ಕೊನೆಯ ನಾಲ್ಕರಲ್ಲಿ ಕೊನೆಗೊಳಿಸಬೇಕಾಯಿತು.