ಭೈರಸಂದ್ರ, ತಿಲಕ್ ನಗರ ವಾರ್ಡ್ ಗಳ ಅವೈಜ್ಞಾನಿಕ ವಾರ್ಡ್ ವಿಂಗಡನೆ: ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಮೌನ ಪ್ರತಿಭಟನೆ

Prasthutha: June 29, 2022

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡ್ ಮತ್ತು ತಿಲಕ್ ನಗರ ವಾರ್ಡ್ ಗಳನ್ನ ಅವೈಜ್ಞಾನಿಕ ವಿಂಗಡನೆ ಮಾಡಿರುವ ರಾಜ್ಯ ಸರ್ಕಾರ ಮತ್ತು ಬಿ.ಬಿ.ಎಂ.ಪಿ.ವಿರುದ್ದ ಕಾಂಗ್ರೆಸ್ ಪಕ್ಷ ಮತ್ತು ಸ್ವಯಂ ಸೇವಾ ಸಂಘಟನೆಗಳು,
ಸಾರ್ವಜನಿಕರು ಭೈರಸಂದ್ರ ವಾರ್ಡ್ ಉಷಾ ಅಪಾರ್ಟ್ ಮೆಂಟ್ ಮುಂಭಾಗದಲ್ಲಿ ಬೃಹತ್ ಮೌನ ಪ್ರತಿಭಟನೆ.

ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರು,ಶಾಸಕಿ ಶ್ರೀಮತಿ ಸೌಮ್ಯ ರೆಡ್ಡಿರವರು ಮತ್ತು ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜುರವರು,ಬಿ.ಬಿ.ಎಂ.ಪಿ.ಸದಸ್ಯರಾದ ಮೊಹಮ್ಮದ್ ರಿಜ್ಞಾನ್,ಮಂಜುನಾಥ್ ,
ಸಮಿವುಲ್ಲ,ಭೈರಸಂದ್ರ ಎಲ್.ಐ.ಸಿ.ಕಾಲೋನಿ ವೆಲ್ ಫೇರ್ ಆಸೋಸಿಯೇಷನ್ ಅಧ್ಯಕ್ಷರಾದ ಬಾಬುರಾವ್,ಪ್ರಾಂಕ್ ಮಾರ್ಥ್,ಪರಮೇಶ್ವರನ್,
ಅಚಾರ್ಯ,
ಕೆನರಾ ಬ್ಯಾಂಕ್ ಕಾಲೋನಿ,ಜಿ.ಹನುಮಂತಪ್ಪ ಲೇಔಟ್ ನಿವಾಸಿಗಳು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಸ್ಥಳೀಯ ನಿವಾಸಿಗಳು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶಾಸಕಿ ಸೌಮ್ಯ ರೆಡ್ಡಿರವರು ಮಾತನಾಡಿ ಬಿ.ಬಿ.ಎಂ.ಪಿ.243ವಾರ್ಡ್ ವಿಂಗಡನೆ ಸಮರ್ಪಕವಾಗಿ ವಿಂಗಡನೆ ಮಾಡಿದ್ದಾರೆ .ಸಾರ್ವಜನಿಕರಿಗೆ ಸುಲಭವಾಗಿ ಆಡಳಿತ ತಲುಪಿಸತ್ತಿತು. ಅದರೆ ರಾಜಕಾರಣಿಗಳ ಮಾತು ಹೇಳಿ ಅಸಮರ್ಪಕ ವಾರ್ಡ್ ವಿಂಗಡನೆ ಮಾಡಿದ್ದಾರೆ.
ಎಲ್ಲ ಧರ್ಮ,ಜಾತಿಯವರು ಒಟ್ಟಾಗಿ ಇದ್ದೀವಿ ಅದರೆ ಬಿ.ಜೆ.ಪಿ.ಸರ್ಕಾರ ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗಟ್ ಮಾಡಿದ್ದಾರೆ.

ವಾರ್ಡ್ ಕಛೇರಿ ಮತ್ತು ಮತದಾನ ಕೇಂದ್ರ ಹತ್ತಿರ ಇರುವ ವಾರ್ಡ್ಗಗೆ ಸೇರಿಸಬೇಕು ಅದರೆ 2ಕಿಲೋ ಮೀಟರ್ ದೂರದ ಪಕ್ಕದ
ವಾರ್ಡ್ ಗೆ.ಸೇರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಸಕರು ಇರುವ ಕಡೆ ವಾರ್ಡ್ ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ.

ಅಧಿಕಾರಿಗಳು ರಾಜ್ಯ ಸರ್ಕಾರದ ಕೈಗೊಂಬೆಯಾಗಿ ವಾರ್ಡ್ ವಿಂಗಡನೆಯನ್ನ ಅವೈಜ್ಞಾನಿಕವಾಗಿ ವಿಂಗಡನೆ ಮಾಡಿದ್ದಾರೆ.

ವಾರ್ಡ್ ವಿಂಗಡನೆ ಸಂದರ್ಭದಲ್ಲಿ ಶಾಸಕರ ಅಭಿಪ್ರಾಯ ಕೇಳಿಲ್ಲ.

ಇಂದು ವಾರ್ಡ್ ವಿಂಗಡನೆ ಅವೈಜ್ಞಾನಿಕದ ಬಗ್ಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜುರವರು ಮಾತನಾಡಿ ಬಿ.ಜೆ.ಪಿ.ಸರ್ಕಾರ ವ್ಯಯಕ್ತಿಕ ಹಿತಾಸಕ್ತಿ ಮತ್ತು ಕೆಲವು ಬಿ.ಜೆ.ಪಿ.ನಾಯಕರು ದುರುದ್ದೇಶದಿಂದ ಭೈರಸಂದ್ರ ವಾರ್ಡ್ ನಲ್ಲಿರುವ 80ಅಡಿ ಭಾಗದಷ್ಟು ಭಾಗವನ್ನು 2ಕಿಲೋ ಮೀಟರ್ ದೂರದಲ್ಲಿರುವ ಪಕ್ಕದ ವಾರ್ಡ್ಗಗೆ ಮತದಾರರನ್ನು ಸೇರಿಸಿ ಮರು ವಿಂಗಡನೆ ಮಾಡಿದ್ದಾರೆ.

ಮತದಾರರು ಮತ್ತು ಸ್ಥಳೀಯ ನಿವಾಸಿಗಳಿಗೆ ವಾರ್ಡ್ ಕಛೇರಿಗೆ ಬರಲು ಮತ್ತು ಮತದಾನ ಮಾಡಲು ಬಹುದೂರ ಸಂಚಾರಿಸಬೇಕು.

ಒಂದು ವರ್ಗದ ಜನರನ್ನ ಹೊಂದಿರುವ ಪ್ರದೇಶವನ್ನು ವಿಂಗಡನೆ ಮಾಡಿ,ಕುತಂತ್ರವಾಗಿ ಗೆಲ್ಲಬಹುದು ಎಂಬ ಕುತಂತ್ರ ರೂಪಿಸಿದ್ದಾರೆ.

ಜಾತಿ,ಜಾತಿ ನಡುವೆ ಸಂಘರ್ಷ ತರುವ ಹಾಗೇ ಮಾಡಿದ್ದಾರೆ,ಬಿ.ಜೆ.ಪಿ.ಸರ್ಕಾರ ತಾರತಮ್ಯ ಮಾಡುತ್ತಿದೆ.

ಬಿ.ಬಿ.ಎಂ.ಪಿ.ಮತ್ತು ನಗರಾಭಿವೃದ್ದಿ ಇಲಾಖೆ ಸರ್ಕಾರದ ಕೈಗೊಂಬೆಯಾಗಿ ಅವೈಜ್ಞಾನಿವಾಗಿ ವಾರ್ಡ್ ವಿಂಗಡನೆ ಮಾಡಿದ್ದಾರೆ.

ವೈಜ್ಞಾನಿಕವಾಗಿ ವಿಂಗಡನೆ ಮತದಾರರಿಗೆ ನ್ಯಾಯ ಒದಗಿಸಬೇಕು ಬಿ.ಬಿ.ಎಂ.ಪಿ.ಮುಖ್ಯ ಆಯುಕ್ತರಿಗೆ ಮನವಿ ಮಾಡಲಾಗುವುದು ನಮಗೆ ನ್ಯಾಯ ಸಿಗದೇ ಹೋದರೆ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಕಾರರು ಹೇಳಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ