Home ಟಾಪ್ ಸುದ್ದಿಗಳು ಮತಾಂತರ ನಿಷೇಧ ಮಸೂದೆ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮತಾಂತರ ನಿಷೇಧ ಮಸೂದೆ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದು ಎಂದು ಆರೋಪಿಸಿ ಬೆಂಗಳೂರಿನಲ್ಲಿ ಬುಧವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸದಸ್ಯರು, ನಾಗರಿಕರು ಪ್ರತಿಭಟನೆ ನಡೆಯಿತು.

ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದ ಪ್ರತಿಭಟನಕಾರರು ರಾಜಧಾನಿಯಲ್ಲಿ ಜಾಥಾ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಮಸೂದೆಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಬಲವಂತದ ಮತಾಂತರ ತಡೆಯಲು ಈಗಾಗಲೇ ಹಲವು ಕಾನೂನು ಇವೆ. ಹೀಗಿರುವಾಗ ಹೊಸ ಮಸೂದೆಯ ಅಗತ್ಯವೇನಿದೆ. ‘ತಮಗೆ ಬೇಕಾದ ಧರ್ಮ ಆಚರಿಸಿ ಮತ್ತು ಧರ್ಮ ಪ್ರಚಾರ ಮಾಡಬಹುದು ಎಂದು ಸಂವಿಧಾನದ 25ನೇ ವಿಧಿ ಹೇಳುತ್ತದೆ. ಎಲ್ಲ ಪಂಗಡಗಳು ಧರ್ಮದ ವಿಚಾರದಲ್ಲಿ ತಮ್ಮದೇ ಆದ ಆಚರಣೆಗಳನ್ನು ನಿರ್ವಹಿಸಬಹುದು ಎಂದು 26ನೇ ವಿಧಿಯೂ ಹೇಳುತ್ತದೆ. ಹೀಗಿರುವಾಗ ಈಗ ಪ್ರಸ್ತಾಪಿಸಿರುವ ಮಸೂದೆಯೂ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ಪ್ರತಿಭಟನಕಾರರು  ಪ್ರಶ್ನಿಸಿದ್ದಾರೆ.

Join Whatsapp
Exit mobile version