ಪಿ.ಎಫ್.ಐ ನಾಯಕರ ಬಂಧನದ ವಿರುದ್ದ ಬಜಪೆಯಲ್ಲಿ ಬೃಹತ್ ಪ್ರತಿಭಟನೆ

Prasthutha|

ಬಜಪೆ: ಬಿಜೆಪಿ ಸರಕಾರದ ದ್ವೇಷ ರಾಜಕೀಯದಿಂದ NIA ಅಧಿಕಾರಿಗಳನ್ನು ಚೂಬಿಟ್ಟು SDPI ಜಿಲ್ಲಾ ಕಛೇರಿಯಲ್ಲಿ ನಡೆಸಿದ ಅತಿಕ್ರಮಣದ ದಾಳಿ ಮತ್ತು ದಬ್ಬಾಳಿಕೆಯ ನೀತಿಯನ್ನು ಖಂಡಿಸಿ. ಹಾಗೂ ಬಿಜೆಪಿ ಸರಕಾರದ ಮತ್ತು ಸಂಘ ಪರಿವಾರದ ವಿರುದ್ಧ ರಾಜಿರಹಿತ ಹೋರಾಟವನ್ನು ನಡೆಸಿದರು ಅನ್ನುವ ಏಕೈಕ ಕಾರಣವನ್ನು ಇಟ್ಟುಕೊಂಡು ಇಂದು ನಮ್ಮ ಅಮಾಯಕ ಸಹೋದರರಾದ ಪಾಪ್ಯುಲರ್ ಫ್ರಂಟ್ ನಾಯಕರ ಅಕ್ರಮ ಬಂಧನವನ್ನು ವಿರೋಧಿಸಿ ಬೃಹತ್ ಐತಿಹಾಸಿಕ ಪ್ರತಿಭಟನೆ ಬಜಪೆ ಜಂಕ್ಷನ್ ನಡೆಯಿತು.

- Advertisement -

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಕೇರಳದಲ್ಲಿ ನೆರೆ ಬಂದ ಸಂದರ್ಭದಲ್ಲಿ ದೇವಸ್ಥಾನಕ್ಕೆ ನೀರು ಬಂದಾಗ ಅದನ್ನು ಸ್ವಚ್ಛಗೊಳಿಸಿದವರು, ಮಾತ್ರವಲ್ಲದೆ ಕೊರೋನ ಸಂದರ್ಭದಲ್ಲಿ ಕೊರೋನ ವಾರಿಯರ್ಸ್ ಆಗಿ ದುಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರ ಮೇಲೆ NIA ದಾಳಿ ಹಾಗು ಬಂಧನ ಇದನ್ನು ತೀರ್ವವಾಗಿ ಖಂಡಿಸಿದ್ದಾರೆ. ನಾವು ಸತ್ಯವನ್ನೇ ಹೇಳುವವರು ಇದನ್ನು ಸಹಿಸಲಾಗದವರು ಪೋಲೀಸರ ಇಲಾಖೆಯ ಬಗ್ಗೆ ನಂಬಿಕೆ ಇಲ್ಲದವರು NIA ಯವರನ್ನು ಛೂ ಬಿಟ್ಟಿದ್ದಾರೆ. ಎಸ್ಡಿಪಿಐ ಯಾರಿಗೆ ಅನ್ಯಾಯ ಆದರೂ ಅವರು ಯಾವುದೇ ಜಾತಿ ಧರ್ಮದವರು ಆಗಿರಲಿ ಅವರ ನ್ಯಾಯಕ್ಕಾಗಿ ಹೋರಾಡಲಿದೆ ಎಂದರು.

ಎಸ್ಡಿಪಿಐ ಜಿಲ್ಲಾ ಅಧ್ಯಕ್ಷರಾದ ಅಬೂಬಕರ್ ಕುಲಾಯಿ ಮಾತನಾಡಿ ಜಿಲ್ಲಾ ಪ್ರಧಾನ ಕಚೇರಿಗೆ ದಾಳಿ ಮಾಡಿದ NIA ಅಧಿಕಾರಿಗಳು ಅವಿದ್ಯಾವಂತರು ಯಾಕೆಂದರೆ ಅವರ ಕೈಯಲ್ಲಿ ಇದ್ದ ಜಾರ್ಜ್ ಶೀಟ್ ಓದಲು ಬರದವರಾಗಿದ್ದಾರೆ. ಅವರ ಕೈಯಲ್ಲಿ ಇದ್ದ ಜಾರ್ಜ್ ಶೀಟ್ ಅದು ಪಿಎಫ್ಐ ಕಚೇರಿಯದ್ದಾಗಿದೆ. ನಿಮ್ಮ ಯಾವುದೇ ದಾಳಿಗೂ ಹೆದರುವುದಿಲ್ಲ ಅವೆಲ್ಲವನ್ನೂ ಮೆಟ್ಟಿ ನಿಂತು ಸಾಗಲಿದ್ದೇವೆ ಮಾತ್ರವಲ್ಲ ಈ ದೇಶದಲ್ಲಿ ದೇಶದ್ರೋಹ ಕೆಲಸದಲ್ಲಿ ತೊಡಗಿರುವ ಆರ್ ಎಸ್ ಎಸ್ ಅನ್ನು ಇಲ್ಲವಾಗಿಸುವವರೆಗೆ ನಾವು ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

- Advertisement -

ಎಸ್ಡಿಪಿಐ ಮುಲ್ಕಿ ಮೂಡಬಿದಿರೆ ಅಧ್ಯಕ್ಷರಾದ ಆಸೀಫ್ ಕೋಟೆಬಾಗಿಲು ನಾವು 1947 ರಲ್ಲಿ ಜೀವಿಸುತ್ತಿರುವುದು ಅಲ್ಲ ಬದಲಾಗಿ 2022 ರಲ್ಲಿ ಇದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾಲವಿದು ಆದುದರಿಂದ ನಿಮ್ಮ ಯಾವುದೇ ಷಡ್ಯಂತ್ರ್ಯ ಕ್ಕೆ ಖಂಡಿತವಾಗಿಯೂ ಪ್ರತಿತಂತ್ರ ರೂಪಿದಿಯೇ ಸಿದ್ದ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷರಾದ ಯಾಸೀನ್ ಅರ್ಕುಳ, ಬಜಪೆ ಪಟ್ಟಣ ಪಂಚಾಯತ್ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್ ಇಂಜಿನಿಯರ್, ಹಾಗು ನೂರಾರು ಮಂದಿ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು.

Join Whatsapp