ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ

Prasthutha|

ಲಡಾಖ್: ಕೇಂದ್ರಾಡಳಿತ ಪ್ರದೇಶವಾಗಿರುವ ಲೇಹ್, ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಜನರು ಮೈ ಕೊರೆವ ಚಳಿಯನ್ನೂ ಲೆಕ್ಕಿಸದೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ಜಂಟಿಯಾಗಿ ಪ್ರತಿಭಟನೆ ಆಯೋಜಿಸಿತ್ತು,

- Advertisement -

ಸಾವಿರಾರು ಜನರು ಲೇಹ್ ಮುಖ್ಯ ನಗರದ ಮೂಲಕ ಮೆರವಣಿಗೆ ನಡೆಸಿದರು. ಲಡಾಖ್‌ನ ಎರಡು ಪ್ರದೇಶಗಳನ್ನು ಪ್ರತಿನಿಧಿಸುವ LAB ಮತ್ತು KDA, ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾದಾಗಿನಿಂದ ರಾಜ್ಯತ್ವ ಮತ್ತು ಆರನೇ ಶೆಡ್ಯೂಲ್ ಸ್ಥಾನಮಾನಕ್ಕಾಗಿ ಪ್ರತಿಪಾದಿಸುತ್ತಿವೆ. ಆಗಸ್ಟ್ 2021 ರಲ್ಲಿ, LAB ಮತ್ತು KDA ತಮ್ಮ ಬೇಡಿಕೆಗಳನ್ನು ವರ್ಧಿಸಲು ಹೋರಾಟಕ್ಕೆ ನಿರ್ಧರಿಸಿದ್ದವು

ಲಡಾಖ್‌ನ ರಾಜ್ಯತ್ವ, ಸಂವಿಧಾನದ ಆರನೇ ಶೆಡ್ಯೂಲ್‌ನ ಅನುಷ್ಠಾನ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಸಂಸದೀಯ ಸ್ಥಾನಗಳನ್ನು ಸ್ಥಾಪಿಸುವ ಘೋಷಣೆಗಳು ಮೆರವಣೆಗೆಯಲ್ಲಿ ಮೊಳಗಿದವು. ಆರ್ಟಿಕಲ್ 370 ಮತ್ತು 35A ರದ್ದತಿಯ ನಂತರ ಲಡಾಖ್ ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾಗಿತ್ತು. 2019 ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು.

Join Whatsapp
Exit mobile version