ಗಾಝಾ: ಗಾಝಾ ಪ್ರದೇಶದಲ್ಲಿ ನಾಗರಿಕರ ಮೇಲೆ ಇಸ್ರೇಲ್ ದಾಳಿ ಮುಂದುವರೆಸಿದ್ದು, 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಝಾದ ಶಾಲೆಯ ಮೇಳೆ ಶೆಲ್ ದಾಳಿ ನಡೆದಿದ್ದು, ಈ ವೇಳೆ ಮಕ್ಕಳು ಅಸುನೀಗಿದ್ದಾರೆ ಎಂದು ಹಮಾಸ್ ನ ಆರೋಗ್ಯ ಇಲಾಖೆ ಪ್ರಕಟಿಸಿದೆ.
ಯುದ್ಧಪೀಡಿತ ಉತ್ತರ ಗಾಝಾದಲ್ಲಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಆಯಂಬುಲೆನ್ಸ್ ಮೇಲೆ ಇಸ್ರೇಲಿನ ವಾಯುಪಡೆ ದಾಳಿ ಮಾಡಿದ ಮತ್ತೊಂದು ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ.
ಯುದ್ಧ ವಿರಾಮದ ನಿರೀಕ್ಷೆಯನ್ನು ಅಲ್ಲಗೆಳೆದ ಇಸ್ರೇಲ್ ಪ್ರಧಾನಿ ಮತ್ತಷ್ಟು ನಾಗರಿಕರ ಹತ್ಯೆಯ ಮುನ್ಸೂಚನೆ ನೀಡಿದ ಬೆನ್ನಿಗೇ ಈ ಘಟನೆಗಳು ನಡೆದಿವೆ.