Home ಟಾಪ್ ಸುದ್ದಿಗಳು ಸರಳ, ಕಡಿಮೆ ಖರ್ಚಿನಲ್ಲಿ ವಿವಾಹವಾಗುವವರಿಗೆ ಸಿಹಿ ಸುದ್ದಿ | ಇನ್ಮುಂದೆ ಪ್ರತಿ ತಿಂಗಳು ಸರಕಾರದಿಂದಲೇ ಸಾಮೂಹಿಕ...

ಸರಳ, ಕಡಿಮೆ ಖರ್ಚಿನಲ್ಲಿ ವಿವಾಹವಾಗುವವರಿಗೆ ಸಿಹಿ ಸುದ್ದಿ | ಇನ್ಮುಂದೆ ಪ್ರತಿ ತಿಂಗಳು ಸರಕಾರದಿಂದಲೇ ಸಾಮೂಹಿಕ ವಿವಾಹ

ಬೆಂಗಳೂರು : ಸರಳ ಹಾಗೂ ಕಡಿಮೆ ಖರ್ಚಿನಲ್ಲಿ ವಿವಾಹವಾಗುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಾದರೆ, ಸರಕಾರದ ಈ ಯೋಜನೆ ನಿಮಗೆ ಖಂಡಿತವಾಗಿಯೂ ಸಹಾಯಕವಾಗಲಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಸಪ್ತಪದಿ’ ಯೋಜನೆಯನ್ನು ಇನ್ನು ಮುಂದೆ ಪ್ರತಿ ತಿಂಗಳು ಸರಕಾರ ನಡೆಸಲು ಚಿಂತಿಸಿದೆ.

ಮಾರ್ಚ್ ತಿಂಗಳಿನಿಂದ ಪ್ರತಿ ತಿಂಗಳು ಸಾಮೂಹಿಕ ವಿವಾಹ ಕಾರ್ಯಕ್ರ ನಡೆಸಲಾಗುತ್ತದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ಯೋಜನೆ ಮೂಲಕ ನೀವು ಕಡಿಮೆ ಖರ್ಚಿನಲ್ಲಿ, ಸರಳ ಸಾಮೂಹಿಕ ವಿವಾಹ ಮಾಡಿಕೊಳ್ಳಬಹುದಾಗಿದೆ ಮತ್ತು ನೆಮ್ಮದಿಯ ವೈವಾಹಿಕ ಜೀವನ ನಡೆಸಬಹುದಾಗಿದೆ. ಮುಂದಿನ ಜ.20 ಹಾಗೂ 23 ಸಾಮೂಹಿಕ ವಿವಾಹಕ್ಕೆ ದಿನ ನಿಗದಿಯಾಗಿದೆ. ಫೆಬ್ರವರಿಯಲ್ಲೂ ಎರಡು ದಿನ ‘ಸಪ್ತಪದಿ’ ಯೋಜನೆಯನ್ವಯ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.   

Join Whatsapp
Exit mobile version