Home ಕರಾವಳಿ ಹರ್ಷನಿಗೆ ಕೊಟ್ಟಂತೆ ಸುಳ್ಯದ ಮಸೂದ್ ಕುಟುಂಬಕ್ಕೂ 25 ಲಕ್ಷ ಪರಿಹಾರ ಕೊಡಲಿ: ಮಾಜಿ ಸಚಿವ ರಮಾನಾಥ...

ಹರ್ಷನಿಗೆ ಕೊಟ್ಟಂತೆ ಸುಳ್ಯದ ಮಸೂದ್ ಕುಟುಂಬಕ್ಕೂ 25 ಲಕ್ಷ ಪರಿಹಾರ ಕೊಡಲಿ: ಮಾಜಿ ಸಚಿವ ರಮಾನಾಥ ರೈ

ಮಂಗಳೂರು: ಕ್ರಿಮಿನಲ್ ಹಿನ್ನೆಲೆಯುಳ್ಳ ಶಿವಮೊಗ್ಗದ ಬಜರಂಗಳ ಕಾರ್ಯಕರ್ತನಿಗೆ ಕೊಟ್ಟಂತೆ ಸುಳ್ಯದಲ್ಲಿ ಅಮಾಯಕ ಯುವಕ ಗುಂಪು ಥಳಿತದಿಂದ ಸಾವನ್ನಪ್ಪಿದ ಮಸೂದ್ ಕುಟುಂಬಕ್ಕೂ 25 ಲಕ್ಷ ಪರಿಹಾರ ಕೊಡಲಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಳ್ಯದಲ್ಲಿ ಅಮಾಯಕ ಯುವಕ ಗುಂಪು ಥಳಿತದಿಂದ ಸಾವನ್ನಪ್ಪಿದ್ದಾನೆ. ಬಿಜೆಪಿ ಕೊಲೆಗಡುಕರ ಪಕ್ಷ. ಕಾಂಗ್ರೆಸ್ ಯಾವತ್ತೂ ಹಿಂಸೆಯನ್ನು ಪ್ರಚೋದಿಸಿಲ್ಲ. ಕಾಂಗ್ರೆಸ್ ನವರ ಮೇಲೆ ಎಫ್ ಐ ಆರ್ ದಾಖಲಾಗಿಲ್ಲ. ಯುವಕನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. 25 ಲಕ್ಷ.ರೂ ಪರಿಹಾರ ನೀಡಬೇಕು ಎಂದು ಹೇಳಿದರು.

ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಸಾವಿಗೆ ನ್ಯಾಯ ಸಿಕ್ಕಿಲ್ಲ. ಈಶ್ವರಪ್ಪರನ್ನು ತನಿಖೆಯಿಂದ ಹೊರಗಿಡಲಾಗಿತ್ತು. ರಾಜಕೀಯ ಪ್ರಭಾವದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಇದರ ಬಗ್ಗೆ ಮೊದಲೇ ಸಚಿವರು ಪರೋಕ್ಷವಾಗಿ ಹೇಳಿದ್ದರು. ಈಗ ಅಧಿಕೃತ ಆಗಿದೆ ಅಷ್ಟೆ. ಹಾಗಾಗಿ ಇದು ಸತ್ಯಕ್ಕೆ ಸಂದ ಜಯ ಎನ್ನುವವರು ನಾಚಿಕೆ ಮಾನ ಮರ್ಯಾದೆ ಇಲ್ಲದವರು. ಈಶ್ವರಪ್ಪ ಮಹಾಭ್ರಷ್ಟಾಚಾರಿ ಎಂದರು.

Join Whatsapp
Exit mobile version