ಉತ್ತರ ಪ್ರದೇಶ: ಮಸೀದಿಗೆ ನುಗ್ಗಿ ಮಿನಾರ ಧ್ವಂಸಗೊಳಿಸಿದ ದುಷ್ಕರ್ಮಿಗಳು

Prasthutha|

ಯೋಗಿ ಆಡಳಿತದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಕೇಂದ್ರಗಳ ದಾಳಿ

- Advertisement -

ಉತ್ತರ ಪ್ರದೇಶ: ದುಷ್ಕರ್ಮಿಗಳ ತಂಡವೊಂದು ಮಸೀದಿಗೆ ನುಗ್ಗಿ ಎರಡು ಮಿನಾರಗಳನ್ನು ಧ್ವಂಸಗೈದಿರುವ ಘಟನೆ ಉತ್ತರ ಪ್ರದೇಶದ ಮಥುರಾದ ನೌಗಾಂವ್ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.


ಮಥುರಾ ಜಿಲ್ಲೆಯ ನೌಗಾಂವ್ ಗ್ರಾಮದಲ್ಲಿರುವ ಮಸೀದಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮಸೀದಿಯ ಒಂದು ಮಿನಾರವನ್ನು ಧ್ವಂಸಗೊಳಿಸಿದೆ. ಇನ್ನೊಂದು ಮಿನಾರ ಹಾಗೂ ಮಸೀದಿಯ ಗೋಡೆಗೆ ಹಾನಿ ಮಾಡಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮಸೀದಿಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.

- Advertisement -


ಬುಧವಾರ ಬೆಳಗ್ಗಿನ ಜಾವ ಗ್ರಾಮಸ್ಥರು ಮಸೀದಿ ಸಮೀಪ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಮುಸ್ಲಿಮ್ ಸಮುದಾಯದವರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.


ಗ್ರಾಮದಲ್ಲಿ ಇದೊಂದೇ ಮಸೀದಿ ಇದ್ದು, ಇಲ್ಲಿ ಸುಮಾರು 2000-2500 ಮುಸ್ಲಿಮರಿದ್ದಾರೆ. ಮಸೀದಿಗೆ ಒಟ್ಟು ನಾಲ್ಕು ಮಿನಾರಗಳಿದ್ದು, ಅವುಗಳಲ್ಲಿ ಎರಡು ಮಿನಾರಗಳಿಗೆ ಹಾನಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp