ಚಿಕ್ಕಮಗಳೂರು: ಮಾರುತಿ ಕಾರಿನಲ್ಲಿ ಹೋಗುತ್ತಿದ್ದವರನ್ನು ಕಾಡಾನೆ ಅಟ್ಟಾಡಿಸಿದ ಘಟನೆ ಮೂಡಿಗೆರೆ ತಾಲೂಕಿನ ದೇವರಮನೆ ಬಳಿ ನಡೆದಿದೆ.
ಶಿವಾಜಿ ಎಂಬವರಿಗೆ ಸೇರಿದ ಮಾರುತಿ ಓಮಿನಿ ಕಾರು ಇದಾಗಿದ್ದು, ಕಾಡಾನೆ ದಾಳಿಗೆ ಭಯಪಟ್ಟ ಚಾಲಕ ಕಾರನ್ನು ರಸ್ತೆ ಪಕ್ಕದ ಚರಂಡಿಗೆ ನುಗ್ಗಿಸಿದ್ದಾನೆ.
ಕಾರಿನಲ್ಲಿದ್ದ ಮೂವರು ಆನೆ ದಾಳಿಗೆ ಹೆದರಿ ಪರಾರಿಯಾಗಿದ್ದಾರೆ.