Home ಕರಾವಳಿ ಸುಳ್ಯ: ನೇಣು ಬಿಗಿದುಕೊಂಡು ವಿವಾಹಿತ ಯುವತಿ ಆತ್ಮಹತ್ಯೆ

ಸುಳ್ಯ: ನೇಣು ಬಿಗಿದುಕೊಂಡು ವಿವಾಹಿತ ಯುವತಿ ಆತ್ಮಹತ್ಯೆ

ಸುಳ್ಯ : ಬಾಡಿಗೆ ಮನೆಯಲ್ಲಿ ವಾಸವಿದ್ದ ವಿವಾಹಿತ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ.

ಆಯಿಶಾ (20) ಮೃತ ಯುವತಿ ಎಂದು ಗುರುತಿಸಲಾಗಿದೆ.

ಸುಳ್ಯ ಗಾಂಧಿನಗರ ಕೆರೆಮೂಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿವಿದ್ದ ಆಮಿನಾ ಎಂಬವರ ಪುತ್ರಿ ಆಯಿಶಾ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಈಕೆಯನ್ನು ನೋಡಿದ ಮನೆಯವರು ಕೂಡಲೇ ಕೆಳಗಿಳಿಸಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಆಕೆ ಮೃತಪಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿದೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Join Whatsapp
Exit mobile version