ಪಶ್ಚಿಮ ಬಂಗಾಳ | ‘ಬಿಜೆಪಿಯಿಂದ ಸುರಕ್ಷಿತನಾಗಿದ್ದೇನೆ’ ಅಭಿಯಾನಕ್ಕೆ ಭಾರೀ ಬೆಂಬಲ

Prasthutha|

ಕೊಲ್ಕತಾ : ‘ಬಿಜೆಪಿಯಿಂದ ಸುರಕ್ಷಿತನಾಗಿದ್ದೇನೆ ಎಂದು ಗುರುತಿಸಿಕೊಳ್ಳಿ’ ಎಂಬ ಟಿಎಂಸಿ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು, ಅಭಿಯಾನ ಆರಂಭವಾದ ಕೆಲವೇ ದಿನಗಳಲ್ಲಿ 10 ಲಕ್ಷ ಬೆಂಬಲಿಗರ ಗಡಿ ದಾಟಿದೆ.

2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನಾ ಬಿಜೆಪಿಯು ದೇಶದಲ್ಲಿ ಎಸಗುತ್ತಿರುವ ತಪ್ಪುಗಳ ಬಗ್ಗೆ ಬೆಳಕು ಚೆಲ್ಲಲು, ಟಿಎಂಸಿ ಈ ಅಭಿಯಾನಕ್ಕೆ ಅ.23ರಂದು ಚಾಲನೆ ನೀಡಿತ್ತು.

- Advertisement -

Savebengalfrombjp.com ವೆಬ್ ಸೈಟ್ 10 ಲಕ್ಷಕ್ಕಿಂತಲೂ ಹೆಚ್ಚು ಜನರು ತಾವು ಸುರಕ್ಷಿತರಾಗಿದ್ದೇವೆ ಎಂದು ಗುರುತಿಸಿಕೊಂಡಿದ್ದಾರೆ. ನ.17ರ ವರೆಗೆ 14 ಲಕ್ಷ ಮಂದಿ ಈ ವೆಬ್ ಸೈಟ್ ಗೆ ಭೇಟಿ ನೀಡಿದ್ದಾರೆ. ಈ ಅಭಿಯಾನಕ್ಕಾಗಿ ರಚಿಸಲಾದ ಫೇಸ್ ಬುಕ್ ಗ್ರೂಪ್ ನಲ್ಲಿ 93,323 ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಅಭಿಯಾನದಲ್ಲಿ 18-35 ವರ್ಷದ ನಡುವಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. \

ಪ್ರವಾಹ, ಭೂಕಂಪ ಮುಂತಾದ ವ್ಯಾಪಕ ಪ್ರಾಕೃತಿಕ ದುರಂತಗಳು ಸಂಭವಿಸಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಗುರುತಿಸಿಕೊಳ್ಳುವ ಅವಕಾಶಗಳನ್ನು ನೀಡಲಾಗಿರುತ್ತದೆ.  

- Advertisement -