Home ಟಾಪ್ ಸುದ್ದಿಗಳು ಮರಿಯಮ್ ಇಸ್ಮಾಯಿಲ್ ಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: WIMನಿಂದ ಸನ್ಮಾನ

ಮರಿಯಮ್ ಇಸ್ಮಾಯಿಲ್ ಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: WIMನಿಂದ ಸನ್ಮಾನ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಪಾತ್ರರಾಗಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯೆ, ಮುಸ್ಲಿಂ ಲೇಖಕಿಯರ ಸಂಘದ ಸದಸ್ಯೆ, ಮತ್ತು ಮಿಡಿತ ತ್ರೈಮಾಸಿಕದ ಸಂಪಾದಕ ಮಂಡಳಿಯ ಸದಸ್ಯೆಯಾಗಿರುವ ಪ್ರಸ್ತುತ ಇನ್ ಲೈಟ್ ರೆಮಿಡಿಯಲ್ ಸಂಸ್ಥೆಯಲ್ಲಿ ರೆಮಿಡಿಯೇಟರ್ ಆಗಿ ಸೇವೆ ಸಲ್ಲಿಸುತ್ತಿರುವ ಮರಿಯಮ್ ಇಸ್ಮಾಯಿಲ್ ರವರಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಬರವಣಿಗೆಯನ್ನು ಹವ್ಯಾಸ ಮಾಡಿ ಕೊಂಡ ಮರಿಯಮ್ ರವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ. ಬ್ಯಾರಿ ನಾಟಕ ಪ್ರಶಸ್ತಿ, ಬ್ಯಾರಿ ಪುರಸ್ಕಾರ ಪ್ರಶಸ್ತಿ, ಸುಶೀಲಾ ಉಪಾಧ್ಯಾಯ ಪ್ರಶಸ್ತಿ ಮತ್ತು ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳೂ ಇವರ ಪಾಲಿಗೆ ಸಂದಿವೆ.

ಇವರು ಮೂರು ಬ್ಯಾರಿ ಪುಸ್ತಕಗಳು (ಊನ್ – ತೀನ್, ನಾಟಿ ಮರಂದ್ ಮತ್ತು ಕುರಾಸೆ) ಹಾಗೂ ಕನ್ನಡದಲ್ಲಿ “ಮದುವೆ ಮಾರ್ಕೆಟ್” ಮತ್ತು “ನಾಟಕ ಪುಸ್ತಕ” ಎಂಬ ಪುಸ್ತಕಗಳನ್ನು ಬರೆದಿದ್ದಾರೆ

Join Whatsapp
Exit mobile version