Home ಕರಾವಳಿ ಮಂಗಳೂರಿನ ಹಲವೆಡೆ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

ಮಂಗಳೂರಿನ ಹಲವೆಡೆ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

ಮಂಗಳೂರು: 33/11ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಗೋಕರ್ಣನಾಥ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಂಡ ಕಾರಣ ಸೆ.20 ಹಾಗೂ 21ರಂದು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸೆ.20ರಂದು:
ಅಳಕೆ, ಗೋಕರ್ಣನಾಥ, ಓಲ್ಡ್ ಗೇಟ್ ರೋಡ್, ಕುದ್ರೋಳಿ, ನಡುಪಳ್ಳಿ, ಸುಂದರ ಐಸ್ ಪ್ಲಾಂಟ್, ಬಸವನ ಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಸೆ.21ರಂದು:
ಕೆ.ಪಿ.ಟಿ.ಸಿ.ಎಲ್ ವತಿಯಿಂದ 220 ಕೆವಿ ಎಂ.ಎಸ್.ಇ.ಝೆಡ್ ಬಜಪೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಟೀಲು ದೇವಸ್ಥಾನ, ಪೆರಾರ, ಈಶ್ವರಕಟ್ಟೆ, ಕಳವಾರು, ಪೆರ್ಮುದೆ, ಬಜಪೆ ಟೌನ್, ಸುಂಕದಕಟ್ಟೆ, ವಾಟರ್ ಸಪ್ಲೈ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡ ಕಾರಣ ಈಶ್ವರ ಕಟ್ಟೆ, ಮುರ, ಶಾಸ್ತಾವು, ಕಿನ್ನಿಕಂಬ್ಳ, ಮೂಡುಪೆರಾರ, ಕೊಳಪಿಲ, ಅರಿಕೆಪದವು, ಶಾಲೆಪದವು, ಕೊಂಪದವು, ಕರಿಕುಮೇರು, ಕಾಪಿಕಾಡು, ನೆಲ್ಲಿಗುಡ್ಡೆ, ಕಲ್ಪನೆ, ಈಶ್ವರಕಟ್ಟೆ, ಮುಂಡಬೆಟ್ಟು, ಬೆಂಗ್ಲೆ, ಕತ್ತಲ್ ಸಾರ್, ಸೌಹಾರ್ದನಗರ, ಸಿದ್ದಾರ್ಥ ನಗರ, ಜರಿನಗರ, ಅಂಬಿಕಾನಗರ, ಸುಂಕದಕಟ್ಟೆ, ಪೆರ್ಮುದೆ, ಭಟ್ರಕೆರೆ, ಸ್ವಾಮಿಲಪದವು, ಹುಣ್ಸೆಕಟ್ಟೆ, ಕಳವಾರು, ಜೋಕಟ್ಟೆ, ಆಶ್ರಯ ಕಾಲೊನಿ, ಕೆಂಜಾರ್, ಎಚ್.ಪಿ.ಸಿ.ಎಲ್ ಕಾಲೊನಿ, ಜೋಕಟ್ಟೆ, ಜಂಕ್ಷನ್, ಎಂ.ಎಸ್.ಇ.ಝೆಡ್ ಕಾಲೊನಿ ಕೊಂಚಾರು, ಶಾಂತಿಗುಡ್ಡೆ, ಬಜಪೆ, ಕಿನ್ನಿಪದವು, ಬಿ.ಪಿ.ಕಂಪೌಂಡ್, ಬಜಪೆ ಸಿಟಿ, ಅಡ್ಕಬಾರೆ, ಮರವೂರು ಡ್ಯಾಂ ವಾಟರ್ ಸಪ್ಲೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

  33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಮಾರ್ಕೆಟ್ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಂಡ ಕಾರಣ ಲೇಡಿಗೋಷನ್ ಹಾಸ್ಪಿಟಲ್, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಜಿ.ಎಚ್.ಎಸ್ ರಸ್ತೆ, ಪಿ.ಎಮ್. ರಾವ್ ರೋಡ್, ಗೌರಿಮಠ ರಸ್ತೆ, ರಾಘವೇಂದ್ರ ಮಠ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

  110/33/11ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆವಿ ಭಾರತೀ ನಗರ ಫೀಡರ್ ಟಿಟಿನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಂಡ ಕಾರಣ ಭಾರತಿನಗರ, ಚಂದ್ರಿಕಾ ಬಡಾವಣೆ, ಕೊಡಿಯಾಲ್ಗುತ್ತು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
Join Whatsapp
Exit mobile version