Home ಟಾಪ್ ಸುದ್ದಿಗಳು ರಷ್ಯಾ ಸೇನೆಯಿಂದ ಹಲವು ಭಾರತೀಯರ ಬಿಡುಗಡೆ: ಕೇಂದ್ರ ಸರಕಾರ

ರಷ್ಯಾ ಸೇನೆಯಿಂದ ಹಲವು ಭಾರತೀಯರ ಬಿಡುಗಡೆ: ಕೇಂದ್ರ ಸರಕಾರ

ನವದೆಹಲಿ: ಮಧ್ಯವರ್ತಿಗಳ ವಂಚನೆಯಿಂದಾಗಿ ರಷ್ಯಾಕ್ಕೆ ತೆರಳಿ ಬಲವಂತವಾಗಿ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ದೂಡಲ್ಪಟ್ಟಿದ್ದ ಹಲವು ಭಾರತೀಯರನ್ನು ರಷ್ಯಾ ಸರ್ಕಾರ ಬಿಡುಗಡೆ ಮಾಡಿದೆ ಎಂದು ಭಾರತ ಸರ್ಕಾರ ಹೇಳಿದೆ.

ಕರ್ನಾಟಕದ ಮೂವರು ಸೇರಿದಂತೆ 60ಕ್ಕೂ ಹೆಚ್ಚು ಭಾರತೀಯರು ರಷ್ಯಾದಲ್ಲಿ ವಂಚನೆಗೊಳಗಾಗಿರುವ ವಿಷಯ ಬೆಳಕಿಗೆ ಬಂದ ಬಳಿಕ ಸರ್ಕಾರ ಹೀಗೆ ಹೇಳಿದೆ.

ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ, ಕೆಲ ಭಾರತೀಯರು ರಷ್ಯಾ ಸೇನೆಯಿಂದ ಮುಕ್ತಿಗೊಳಿಸುವಂತೆ ಬೇಡಿಕೆ ಇಟ್ಟಿರುವ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ನಾವು ನಿರ್ದಿಷ್ಟವಲ್ಲದ ವರದಿಗಳನ್ನು ಗಮನಿಸಿದ್ದೇವೆ. ಇಂಥ ಪ್ರತಿ ಪ್ರಕರಣಗಳನ್ನೂ ನಾವು ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಗಮನಕ್ಕೆ ಮತ್ತು ಭಾರತದಲ್ಲಿನ ರಷ್ಯಾ ದೂತಾವಾಸ ಕಚೇರಿಗೆ ಗಮನಕ್ಕೆ ತಂದಿದ್ದೇವೆ. ಈ ಪೈಕಿ ಈಗಾಗಲೇ ಹಲವು ಭಾರತೀಯರನ್ನು ಭಾರತೀಯ ಸರ್ಕಾರದ ಕೋರಿಕೆಗೆ ಮೇರೆಗೆ ರಷ್ಯಾ ಬಿಡುಗಡೆ ಮಾಡಿದೆ. ರಷ್ಯಾದಲ್ಲಿ ಸಿಕ್ಕಿಬಿದ್ದಿರುವ ಪ್ರತಿ ಭಾರತೀಯರ ಬಿಡುಗಡೆ ನಮ್ಮ ಆದ್ಯತೆಯಾಗಿರಲಿದೆ. ಇದೇ ವೇಳೆ ಉಕ್ರೇನ್‌ನ ಸಂಘರ್ಷಮಯ ಪ್ರದೇಶದಿಂದ ದೂರ ಇರುವಂತೆ ನಾವು ಎಲ್ಲಾ ಭಾರತೀಯರಿಗೂ ಕೋರಿಕೆ ಸಲ್ಲಿಸುತ್ತೇವೆ ಎಂದು ಹೇಳಿದೆ.

Join Whatsapp
Exit mobile version