Home ರಾಷ್ಟ್ರೀಯ ಮಹಾರಾಷ್ಟ್ರ ಚುನಾವಣೆಯಿಂದ ಹಿಂದೆ ಸರಿದ ಮನೋಜ್ ಜಾರಂಗೆ ಪಾಟೀಲ್

ಮಹಾರಾಷ್ಟ್ರ ಚುನಾವಣೆಯಿಂದ ಹಿಂದೆ ಸರಿದ ಮನೋಜ್ ಜಾರಂಗೆ ಪಾಟೀಲ್

ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಮನೋಜ್ ಜಾರಂಗೆ ಪಾಟೀಲ್ ಮಹಾರಾಷ್ಟ್ರ ಚುನಾವಣೆಯಿಂದ ಹಿಂದೆ ಸರಿದಿದ್ದು , ತಮ್ಮ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.


ನವೆಂಬರ್ 20 ರ ಚುನಾವಣೆಯಲ್ಲಿ 10-15 ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ ಒಂದು ದಿನದ ನಂತರ ಯೂ-ಟರ್ನ್ ತೆಗೆದುಕೊಂಡಿದ್ದಾರೆ.


ಜಾಲ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ನಿರ್ಧಾರವನ್ನು ಒತ್ತಡದಿಂದ ತೆಗೆದುಕೊಂಡಿಲ್ಲ, ಮೀಸಲಾತಿ ಕುರಿತ ಅಭಿಯಾನ ಮುಂದುವರೆಯುವುದು ಎಂದು ಸ್ಪಷ್ಟಪಡಿಸಿದರು.


ಈ ಚುನಾವಣೆಯಲ್ಲಿ ದಲಿತ ಮತ್ತು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೊರಟಿದ್ದೆವು. ಆದರೆ, ಒಂದು ಜಾತಿಯ ಬಲದ ಮೇಲೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲ ಎಂದರು.


ಯಾರನ್ನು ಸೋಲಿಸಬೇಕು ಎಂಬುದನ್ನು ಜನರೇ ನಿರ್ಧರಿಸಬೇಕು, ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಜಾರಂಗೆ ಹೇಳಿದರು. ನಾವು ರಾಜಕೀಯಕ್ಕೆ ಹೊಸಬರು, ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅವರು ಸೋತರೆ, ಅದು ಜಾತಿಗೆ ನಾಚಿಕೆಗೇಡಿನ ಸಂಗತಿಯಾಗಲಿದೆ. ಆದ್ದರಿಂದ ಎಲ್ಲಾ ಮರಾಠಾ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆಯಲು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.

Join Whatsapp
Exit mobile version