Home ಕರಾವಳಿ ಮಂಜೇಶ್ವರ: ಶಾಲಾ ಮಕ್ಕಳ ಶಿಕ್ಷಣದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕೆಪಿಎಸ್‌ಟಿಎ ಧರಣಿ

ಮಂಜೇಶ್ವರ: ಶಾಲಾ ಮಕ್ಕಳ ಶಿಕ್ಷಣದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕೆಪಿಎಸ್‌ಟಿಎ ಧರಣಿ

 ಉಪ್ಪಳ: ಕೇರಳ ಪ್ರದೇಶ ಶಾಲಾ ಶಿಕ್ಷಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿಯು(ಕೆಪಿಎಸ್‌ಟಿಎ) ಉಪಜಿಲ್ಲಾ ಶಿಕ್ಷಣ ಕಛೇರಿ ಎದುರು ಸಂಜೆ ಧರಣಿ ನಡೆಸಿತು.  

ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಊಟದ ಪ್ರಮಾಣವನ್ನು ಹೆಚ್ಚಿಸುವುದು, ಶಿಕ್ಷಕರು ಮತ್ತು ಸಿಬ್ಬಂದಿಗೆ ಬಾಕಿ ಇರುವ ಡಿಎ ಮಂಜೂರು ಮಾಡುವುದು, ಅವೈಜ್ಞಾನಿಕ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸುವುದು ಮುಂತಾದ ಬೇಡಿಕೆಗಳಿಗೆ ಒತ್ತಾಯಿಸಿ ಧರಣಿ ನಡೆಯಿತು.

 ಶಿಕ್ಷಣ ಜಿಲ್ಲಾಧ್ಯಕ್ಷ ವಿಮಲ್ ಆದಿಯೋಟಿ ಪ್ರಾಸ್ತಾವಿಕ ಮಾತನಾಡಿದರು.  ಗೆಜೆಟೆಡ್ ಅಧಿಕಾರಿಗಳ ಸಂಘದ ರಾಜ್ಯ ಕೌನ್ಸಿಲರ್ ಬಿಜು ರಾಜ್.  ಎಸ್. ಪ್ರಕಾಶನ್, ರಂಜಿತ್ ಮತ್ತು ಸೋನಿಯಾ ಮಾತನಾಡಿದರು. ಜಬ್ಬಾರ್ ಧನ್ಯವಾದವಿತ್ತರು. ಕೆಪಿಎಸ್‌ಟಿಎ ಜಿಲ್ಲಾ ಜೊತೆ ಕಾರ್ಯದರ್ಶಿ ಜನಾರ್ದನನ್ ಕೆ.ವಿ. ಉದ್ಘಾಟಿಸಿದರು. ಇಸ್ಮಾಯಿಲ್ ಮೀಯಪದವು ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ರಶೀದ್ ಒ.ಎಂ ಸ್ವಾಗತಿಸಿದರು.

Join Whatsapp
Exit mobile version