ಮಂಜೇಶ್ವರ: ಆರೋಗ್ಯ ರಂಗ ಹಾಗೂ ಪರಿಸರ ಸಂರಕ್ಷಣೆಗೆ ಗ್ರಾಮ ಪಂಚಾಯತ್ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶ ಕಸದರಾಶಿಯಲ್ಲಿ ತುಂಬಿ ದುರ್ವಾಸನೆ ಬೀರುತ್ತಿದೆ.ಚರಂಡಿಗಳಲ್ಲಿ ಕಸ ಕಡ್ಡಿಗಳು ಹಾಗೂ ಹುಳಗಳು ತುಂಬಿ ದುರ್ವಾಸನೆ ಬೀರುತ್ತಾ ತಿಂಗಳುಗಳೇ ಕಳೆದಿವೆ. ದುರ್ವಾಸನೆ ತಾಳಿಕೊಂಡು ಸುಸ್ತಾಗುವ ಪಾದಚಾರಿಗಳು ಹಾಗೂ ವ್ಯಾಪಾರ ಸಂಸ್ಥೆಗಳ ಮಾಲೀಕರ ದೂರುಗಳಿಗೆ ಇದುವರೆಗೂ ಅಧಿಕಾರಿಗಳು ಪರಿಹಾರ ಕಂಡುಕೊಂಡಿಲ್ಲ. ವ್ಯಾಪಾರ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿ ಸೌಲಭ್ಯ ಕಲ್ಪಿಸಲು ಪಂಚಾಯತ್’ಗೆ ಇನ್ನೂ ಸಾಧ್ಯವಾಗಿಲ್ಲ. ‘ಮಾಲಿನ್ಯ ಮುಕ್ತ ನವ ಕೇರಳ’ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ನಡೆಸುತ್ತಿದೆ ಹಾಗೂ ತ್ಯಾಜ್ಯ ವಿಲೇವಾರಿಗೆ ಪಂಚಾಯತ್ ಆಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.ರಾಷ್ಟ್ರೀಯ ಹೆದ್ದಾರಿ ಮತ್ತಿತರ ಕಡೆಗಳಲ್ಲಿ ತುರ್ತಾಗಿ ಮಾಲಿನ್ಯ ವಿಲೇವಾರಿ ಸರಿಯಾಗಿ ನಡೆಸದಿದ್ದರೆ ಪಂಚಾಯತ್ ಆವರಣಕ್ಕೆ ತಂದು ಸುರಿಯಲಾಗುವುದು ಎಂದು ಎಸ್ ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ಇಕ್ಬಾಲ್ ಕುಂಜತ್ತೂರು ತಿಳಿಸಿದ್ದಾರೆ.