Home ಕರಾವಳಿ ಮಂಜೇಶ್ವರ: ಮಗುಚಿ ಬಿದ್ದ ಬಸ್, 15ಕ್ಕೂ ಹೆಚ್ಚು ಮಂದಿಗೆ ಗಾಯ

ಮಂಜೇಶ್ವರ: ಮಗುಚಿ ಬಿದ್ದ ಬಸ್, 15ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಬಸ್ಸೊಂದು ರಸ್ತೆ ಬದಿ ಮಗುಚಿ ಬಿದ್ದ ಘಟನೆ ಇಂದು ಸಂಜೆ ಮಂಜೇಶ್ವರ ಸಮೀಪದ ಪೊಸೊಟ್ ಎಂಬಲ್ಲಿ ನಡೆದಿದೆ.

ಅಪಘಾತದಿಂದ 15 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ.

ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಕೇರಳ ಮಲಬಾರ್ ಬಸ್ ಪೊಸೋಟ್ ಪೆಟ್ರೋಲ್ ಪಂಪ್ ಬಳಿ ಪಲ್ಟಿಯಾಗಿದೆ.

ಬಸ್ ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. 15ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ವಿವಿಧ ಅಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Join Whatsapp
Exit mobile version