Home ಟಾಪ್ ಸುದ್ದಿಗಳು ಮಂಜೇಶ್ವರ: ಅಣ್ಣನಿಂದ ತಮ್ಮನ ಕೊಲೆ

ಮಂಜೇಶ್ವರ: ಅಣ್ಣನಿಂದ ತಮ್ಮನ ಕೊಲೆ

ಕಾಸರಗೋಡು: ಅಣ್ಣನೇ ತನ್ನ ಸಹೋದರನನ್ನು ಕೊಲೆ ಮಾಡಿರುವ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆ ಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.


ಪೈವಳಿಕೆ ಕಳಾಯಿಯ ಪ್ರಭಾಕರ ನೋಂಡಾ (40) ಕೊಲೆಗೀಡಾದವರು. ಸಹೋದರ ಜಯರಾಮ ನೋಂಡಾ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಸಹೋದರರ ನಡುವಿನ ವೈಷಮ್ಯ ಕೊಲೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

Join Whatsapp
Exit mobile version