ಸದಾಶಿವ, ಕಾಂತರಾಜು ವರದಿ ಜಾರಿ ಪರ ನಿರ್ಣಯ ಅಂಗೀಕರಿಸಿದ ಮಂಜನಾಡಿ ಗ್ರಾಮ ಪಂಚಾಯತ್

Prasthutha|

ಉಳ್ಳಾಲ : ಒಳ ಮೀಸಲಾತಿ ನೀಡುವ ಸದಾಶಿವ ಆಯೋಗದ ವರದಿ ಮತ್ತು ಜಾತಿ ಗಣತಿಯ ಕಾಂತರಾಜು ವರದಿ ಜಾರಿಗೆ ಆಗ್ರಹಿಸಿ ಮಂಜನಾಡಿ ಗ್ರಾಮ ಪಂಚಾಯತ್ ನಿರ್ಣಯ ಅಂಗೀಕರಿಸಿದೆ.

- Advertisement -

ಮಂಜನಾಡಿ ಗ್ರಾಮ ಪಂಚಾಯತ್’ನ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಜನತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ರಚಿಸಲ್ಪಟ್ಟ ಬಹುನಿರೀಕ್ಷಿತ ಸದಾಶಿವ ಆಯೋಗ, ಕಾಂತರಾಜು ಆಯೋಗದ ವರದಿ ಮತ್ತು 2B ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯರಾದ ನೌಶಾದ್ ಕಲ್ಕಟ್ಟ, ಶಾಕೀರ್ ಮೊಂಟೆಪದವು ಅವರು ಸಭೆಯಲ್ಲಿ ಪ್ರಸ್ತಾಪಿಸಿ ಸದನದ ಗಮನ ಸೆಳೆದಿದ್ದರು. ಈ ಬಗ್ಗೆ ಚರ್ಚೆ ನಡೆದು, ಅಂತಿಮವಾಗಿ ಸದಾಶಿವ ಆಯೋಗ ಮತ್ತು ಕಾಂತರಾಜು ವರದಿ ಜಾರಿಗೊಳಿಸುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಈ ನಿರ್ಣಯದ ಮೂಲಕ ಮೇಲಿನ ಎರಡೂ ಆಯೋಗವನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆಯ ಮೂಲಕ ಮನವಿ ಸಲ್ಲಿಸಲಾಯಿತು. ಪ್ರಸಕ್ತ ಸದಾಶಿವ ಆಯೋಗ ಮತ್ತು ಕಾಂತರಾಜು ಆಯೋಗದ ವರದಿ ಜಾರಿಗೊಳಿಸುವ ಕುರಿತು ಪ್ರಸ್ತಾಪ ಸಲ್ಲಿಸಿ, ನಿರ್ಣಯ ಅಂಗೀಕಾರಕ್ಕೆ ಸಹಕರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ, ಉಪಾಧ್ಯಕ್ಪ ಅಥಾವುಲ್ಲಾಹ್ ಮತ್ತು ಸರ್ವ ಸದಸ್ಯರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯರ ನಡೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



Join Whatsapp