Home ಟಾಪ್ ಸುದ್ದಿಗಳು ಬಿಜೆಪಿ ಸೇರಿದರೆ ಪ್ರಕರಣ ಮುಚ್ಚುವುದಾಗಿ ಸಂದೇಶ: ಮನೀಶ್ ಸಿಸೋಡಿಯಾ ಆರೋಪ

ಬಿಜೆಪಿ ಸೇರಿದರೆ ಪ್ರಕರಣ ಮುಚ್ಚುವುದಾಗಿ ಸಂದೇಶ: ಮನೀಶ್ ಸಿಸೋಡಿಯಾ ಆರೋಪ

ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಸೇರಿದರೆ ತಮ್ಮ ವಿರುದ್ಧದ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ತಮಗೆ ಬಿಜೆಪಿಯಿಂದ ಸಂದೇಶ ಬಂದಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ, ಎಎಪಿಯನ್ನು ತೊರೆದು ಬರಲು ಮತ್ತು ತಮ್ಮ ವಿರುದ್ಧದ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸಲು ಬಿಜೆಪಿಗೆ ಸೇರುವಂತೆ ಬಿಜೆಪಿಯಿಂದ ಸಂದೇಶ ಬಂದಿದೆ ಎಂದು ತಿಳಿಸಿದರು.

ಅಲ್ಲದೆ ಈ ಕುರಿತು ಪ್ರತಿಕ್ರಯಿಸಿರುವ ಅವರು, ನಾನು ರಜಪೂತ, ಮಹಾರಾಣಾ ಪ್ರತಾಪ್ ಅವರ ವಂಶಸ್ಥ. ನಾನು ನನ್ನ ತಲೆಯನ್ನು ಕತ್ತರಿಸುತ್ತೇನೆ ಆದರೆ ಭ್ರಷ್ಟ ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು. ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಮಾಡಿ ಎಂದು ಎಚ್ಚರಿಸಿದರು.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಶುಕ್ರವಾರ ಸಿಬಿಐ ದಾಳಿ ನಡೆಸಿತ್ತು.

Join Whatsapp
Exit mobile version