ಅಹ್ಮದಾಬಾದ್: ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದರೆ ಎಂಟು ಪ್ರಮುಖ ನಗರಗಳಲ್ಲಿ ಪ್ರತಿ ನಾಲ್ಕು ಕಿಲೊ ಮೀಟರ್ಗೆ ಒಂದು ಸರ್ಕಾರಿ ಶಾಲೆಯನ್ನು ಆರಂಭಿಸುವುದಾಗಿ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಅವು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿರಲಿವೆ ಎಂದು ಸಿಸೋಡಿಯಾ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಅಹಮದಾಬಾದ್, ಸೂರತ್, ವಡೋದರಾ, ಜಾಮ್ನಗರ, ರಾಜ್ಕೋಟ್, ಭಾವನಗರ, ಗಾಂಧಿನಗರ ಮತ್ತು ಜುನಾಗಢದಲ್ಲಿ ಪ್ರತಿ ನಾಲ್ಕು ಕಿ.ಮೀ.ಗೊಂದು ಸರ್ಕಾರಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.
ಎಎಪಿ ನಡೆಸಿದ ಶಾಲೆಗಳ ಸಮೀಕ್ಷೆ ಪ್ರಕಾರ ಗುಜರಾತ್ ನಲ್ಲಿ 48,000 ಸರ್ಕಾರಿ ಶಾಲೆಗಳು ಇವೆ. ಅವುಗಳಲ್ಲಿ 32,000 ಕೆಟ್ಟ ಸ್ಥಿತಿಯಲ್ಲಿವೆ ಎಂದು ಅವರು ವಿವರಿಸಿದರು.
ಸಿಬಿಐ ವಿಚಾರಣೆ ಕುರಿತು ಪ್ರತಿಕ್ರಿಯಿಸಿದರ ಅವರು, ತಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಜೈಲಿಗೆ ಹೋಗಲೂ ತಯಾರಿದ್ದೇನೆ. ಆದರೆ, ಗುಜರಾತ್ ನಲ್ಲಿ ಶಾಲೆಗಳ ನಿರ್ಮಾಣ ನಿಲ್ಲುವುದಿಲ್ಲ ಎಂದರು.