Home ಟಾಪ್ ಸುದ್ದಿಗಳು ಮಣಿಪುರ: 24,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಶಿಬಿರಗಳಿಂದಲೇ ಮತದಾನದ ವ್ಯವಸ್ಥೆ

ಮಣಿಪುರ: 24,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಶಿಬಿರಗಳಿಂದಲೇ ಮತದಾನದ ವ್ಯವಸ್ಥೆ

ಇಂಫಾಲ್: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಲೋಕಸಭೆ ಚುನಾವಣೆ ಸುಸೂತ್ರವಾಗಿ ಆಯೋಜಿಸುವುದು ದೊಡ್ಡ ಸವಾಲಾಗಿದ್ದು, ಸ್ಥಳಾಂತರಗೊಂಡ 24,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಶಿಬಿರಗಳಿಂದಲೇ ಮತದಾನದ ಹಕ್ಕು ಚಲಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ಝಾ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಒಟ್ಟು 2,955 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ ಶೇ 50ರಷ್ಟು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸ್ಥಳಾಂತರಗೊಂಡ ಜನರಿಗೆ ಮತದಾನ ಮಾಡಲು 94 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಣಿಪುರದಲ್ಲಿ ಕಳೆದ ವರ್ಷ ಮೇ 3ರಂದು ಆರಂಭವಾಗಿದ್ದ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 219 ಮಂದಿ ಮೃತಪಟ್ಟಿದ್ದಾರೆ. ಮನೆಗಳನ್ನು ತೊರೆದಿರುವ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು, ವಿವಿಧ ಜಿಲ್ಲೆಗಳಲ್ಲಿ ತೆರೆಯಲಾಗಿರುವ ಆಶ್ರಯ ಶಿಬಿರಗಳಲ್ಲಿ ನೆಲೆಸಿದ್ದಾರೆ.

ಲೋಕಸಭೆಯ ಎರಡು ಕ್ಷೇತ್ರಗಳಿರುವ ಮಣಿಪುರದಲ್ಲಿ ಏಪ್ರಿಲ್ 19 ಹಾಗೂ 26ರಂದು ಮತದಾನ ನಡೆಯಲಿದೆ. ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.

Join Whatsapp
Exit mobile version