Home ಟಾಪ್ ಸುದ್ದಿಗಳು ಮಣಿಪುರ | ಮತಗಟ್ಟೆ ಬಳಿ ಗುಂಡಿನ ದಾಳಿ: ಮೂವರ ಬಂಧನ

ಮಣಿಪುರ | ಮತಗಟ್ಟೆ ಬಳಿ ಗುಂಡಿನ ದಾಳಿ: ಮೂವರ ಬಂಧನ

ಇಂಫಾಲ(ಮಣಿಪುರ): ಇಂಫಾಲ್ ಪೂರ್ವ ಜಿಲ್ಲೆಯ ಮತಗಟ್ಟೆಯ ಬಳಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಮೂವರು ದುಷ್ಕರ್ಮಿಗಳನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಮೊಯಿರಂಗ್ಯಾಂಪು ಸಾಜೆಬ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಂಧಿತ ವ್ಯಕ್ತಿಗಳು ಭಾಗಿಯಾಗಿದ್ದು, ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಬಂಧಿತರಿಂದ 22 ಪಿಸ್ತೂಲ್ಗಳು ಮತ್ತು ₹15 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

Join Whatsapp
Exit mobile version