Home ಟಾಪ್ ಸುದ್ದಿಗಳು ಮಣಿಪುರ ಬೆತ್ತಲೆ ಮೆರವಣಿಗೆ | `ಮೊಸಳೆ ಕಣ್ಣೀರು’ ಮೋದಿ ಟ್ರೋಲ್

ಮಣಿಪುರ ಬೆತ್ತಲೆ ಮೆರವಣಿಗೆ | `ಮೊಸಳೆ ಕಣ್ಣೀರು’ ಮೋದಿ ಟ್ರೋಲ್

ನವದೆಹಲಿ: ಇಡೀ ದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ಮಣಿಪುರ ಘಟನೆ ಬಗ್ಗೆ ಪ್ರಧಾನಿ ಮೋದಿಯವರು ನಿನ್ನೆ ಮೌನ ಮುರಿದಿದ್ದರು.


ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಮಾಡಿಸಿದ ಘಟನೆ ಬಗ್ಗೆ ನೋವು ವ್ಯಕ್ತಪಡಿಸಿದ್ದರು. ಘಟನೆ ಬಗ್ಗೆ ನನ್ನ ಹೃದಯದಲ್ಲಿ ನೋವಿದೆ, ಕೋಪ ಇದೆ ಎಂದಿದ್ದರು. ಹೆಣ್ಮಕ್ಕಳ ಮೇಲೆ ನಡೆದ ದೌರ್ಜನ್ಯವನ್ನ ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದ ಮೋದಿ, ತಪ್ಪು ಮಾಡಿದವರನ್ನು ಬಿಡೋದೇ ಇಲ್ಲ ಎಂದು ಭರವಸೆ ಕೊಟ್ಟಿದ್ದರು. ಮೋದಿಯವರ ಈ ಹೇಳಿಕೆಗಳೇ ನಿನ್ನೆ ಇಡೀ ದಿನ ಸದ್ದು ಮಾಡಿದ್ದವು. ಬಿಜೆಪಿಯವರು ಮತ್ತು ಬಲಪಂಥೀಯರು ಸೇರಿಕೊಂಡು ಮೋದಿಯವರ ಮಾತುಗಳನ್ನು ದೈವವಾಣಿಯೆಂಬಂತೆ ಬಿಂಬಿಸಿದ್ದವು. ಆದರೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಮೋದಿಯವರ ತಮ್ಮ ಮಾತುಗಳಿಗಾಗಿ ಟ್ರೋಲ್ ಆಗ್ತಿದ್ದಾರೆ. ಪ್ರಧಾನಿಯ ಹೇಳಿಕೆಗೆ ರಾಷ್ಟ್ರೀಯ ದೈನಿಕ ‘ದಿ ಟೆಲಿಗ್ರಾಫ್’ ಇಂದು(ಜು.21) ಮುಖಪುಟದಲ್ಲೇ ಪರೋಕ್ಷ ಟಾಂಗ್ ಕೊಟ್ಟಿದ್ದು, 79 ದಿನಗಳ ನಂತರ ‘ಮೊಸಳೆ ಕಣ್ಣೀರು’ ಎಂದು ಜಾಡಿಸಿದೆ. ಇದು ದೇಶದ ಜನತೆಯ ಗಮನ ಸೆಳೆದಿದ್ದು, ಪ್ರಧಾನಿಯವರ ಬೇಜವಾಬ್ದಾರಿತನ ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದೆ.


’56 ಇಂಚಿನ ಚರ್ಮಕ್ಕೆ ನೋವು ಮತ್ತು ಅವಮಾನ ತಿಳಿಯಲು 79 ದಿನ ಬೇಕಾಯಿತು’ ಎಂಬ ಶೀರ್ಷಿಕೆಯೊಂದಿಗೆ ಮೊಸಳೆಯೊಂದು ಕಣ್ಣೀರು ಹಾಕುತ್ತಿರುವ ಗ್ರಾಫಿಕ್ಸ್ ಅನ್ನು ಬಳಸಿ, ‘ದಿ ಟೆಲಿಗ್ರಾಫ್’ ಪತ್ರಿಕೆಯು ಮುಖಪುಟದಲ್ಲಿ ಪ್ರಕಟಿಸಿದೆ.


ಪತ್ರಿಕೆಯ ಮುಖಪುಟವನ್ನು ಸಾವಿರಾರು ಮಂದಿ ಲೈಕ್, ಶೇರ್ ಹಾಗೂ ರೀಟ್ವೀಟ್ ಮಾಡುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸತ್ಯವನ್ನು ಈ ರೀತಿ ಬರೆಯುತ್ತಿರುವುದನ್ನು ನೋಡಲು ನಿಜಕ್ಕೂ ಖುಷಿಯಾಗುತ್ತಿದೆ. ನಮ್ಮದೊಂದು ಸೆಲ್ಯೂಟ್ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version