Home ಟಾಪ್ ಸುದ್ದಿಗಳು NRC ಜಾರಿ, ಜನಸಂಖ್ಯಾ ಆಯೋಗ ರಚನೆಗೆ ಮುಂದಾದ ಮಣಿಪುರ ಸರ್ಕಾರ

NRC ಜಾರಿ, ಜನಸಂಖ್ಯಾ ಆಯೋಗ ರಚನೆಗೆ ಮುಂದಾದ ಮಣಿಪುರ ಸರ್ಕಾರ

ಇಂಫಾಲ: NRC ಜಾರಿ ಮತ್ತು ಜನಸಂಖ್ಯಾ ಆಯೋಗ ರಚನೆ ಮಾಡುವ ನಿಟ್ಟಿನಲ್ಲಿ ಮಣಿಪುರ ಅಸೆಂಬ್ಲಿಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಹೇಳಲಾಗಿದೆ.

ಬಜೆಟ್ ಅಧಿವೇಶನದ ಕೊನೆಯ ದಿನ ಜೆಡಿಯು ಸದಸ್ಯ ಜಾಯ್’ಕಿಶನ್ ಅವರು ಇದಕ್ಕೆ ಸಂಬಂಧಿಸಿದಂತೆ ಖಾಸಗಿ ನಿರ್ಣಯವನ್ನು ಮಂಡಿಸಿದ್ದರು.
ಮಣಿಪುರದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ 1971 – 2001 ರ ಅವಧಿಯಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಶೇ. 153.3 ರಷ್ಟು ಏರಿಕೆಯಾಗಿದೆ. ಅಲ್ಲದೆ 2001 – 2011 ರ ಅವಧಿಯಲ್ಲಿ ಅದು ಶೇ. 250.9 ರಷ್ಟು ಏರಿಕೆಯಾಗಿದೆ ಎಂದು ಅವರು ವಾದಿಸಿದರು.

Join Whatsapp
Exit mobile version