ಉಡುಪಿ: ಕುಖ್ಯಾತ ಬೈಕ್ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದು ಈತನ ಬಂಧನದೊಂದಿಗೆ 13ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಉಡುಪಿಯ ಮಣಿಪಾಲ್ ನಿವಾಸಿ ಗುರುರಾಜ್ ನಾಯಕ್ ಬಂಧಿತ ಆರೋಪಿ. ಆಗಸ್ಟ್ 7 ರಂದು ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿಪಿ ನಗರ ಮೂರನೇ ಅಡ್ಡರಸ್ತೆಯ ನೂಮಾ ಅಪಾರ್ಟ್ ಮೆಂಟ್ ಬಳಿ ನಿಲ್ಲಿಸಿದ್ದ ಸ್ಕೂಟರನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆಗಸ್ಟ್ 12ರಂದು ಆರೋಪಿ ಗಿರಿರಾಜನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಉಡುಪಿ ನಗರ, ಕುಂದಾಪುರ ಪೊಲೀಸ್ ಠಾಣೆ, ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 13ಕ್ಕೂ ಹೆಚ್ಚು ಬೈಕ್ ಗಳ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷ ಸುಧಾಕರ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಎಂ, ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ್ ವಂದಲಿ ಮತ್ತು ಸುಧಾಕರ್ ತೋನ್ಸೆ, ಪಿ ಎಸ್ ಐ ಪರಶುರಾಮ್ , ಎಸ್ ಐ ಶೈಲೇಶ್ ಕುಮಾರ್ ಸಿಬ್ಬಂದಿಗಳಾದ ದಯಾಕರ್ ಪ್ರಸಾದ್, ಅಬ್ದುಲ್ ರಜಾಕ್ ಪ್ರಸನ್ನ, ಇಮ್ರಾನ್ ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.