Home ಕರಾವಳಿ ಮಂಗಳೂರು | ಅಗತ್ಯ ಸಾಮಗ್ರಿ ಖರೀದಿಗೆ ವಾಹನ ಬಳಸಬಹುದು : ಕಮಿಷನರ್ ಸ್ಪಷ್ಟನೆ

ಮಂಗಳೂರು | ಅಗತ್ಯ ಸಾಮಗ್ರಿ ಖರೀದಿಗೆ ವಾಹನ ಬಳಸಬಹುದು : ಕಮಿಷನರ್ ಸ್ಪಷ್ಟನೆ

ಮಂಗಳೂರು: ಬೆಳಿಗ್ಗೆ 6ಗಂಟೆಯಿಂದ 9ಗಂಟೆಯವರೆಗೆ ಅಗತ್ಯವಿದ್ದರೆ ವಾಹನ ಬಳಸಬಹುದು ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಈ ಮೂಲಕ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ವಾಹನ ಬಳಸುವ ಬಗ್ಗೆ ಸಾರ್ವಜನಿಕರ ನಡುವೆ ಇದ್ದ ಗೊಂದಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ.

ಬೆಳಿಗ್ಗೆ 6ರಿಂದ 9 ಗಂಟೆ ತನಕ ಅಗತ್ಯವಿದ್ದರೆ ವಾಹನ ಬಳಸಬಹುದಾಗಿದೆ. ಅದಷ್ಟು ತಮ್ಮ ಮನೆಯ ಬಳಿಯ ಅಂಗಡಿ ಮುಗ್ಗಟ್ಟುಗಳಲ್ಲಿ ಸಾಮಾನು ಖರೀದಿಸುವಂತೆ ಕಮಿಷನರ್ ವಿನಂತಿಸಿದ್ದಾರೆ.

ಖಾಸಗಿ ಕಂಪೆನಿಯ ಉದ್ಯೋಗಿಗಳು ವಾಹನದಲ್ಲಿ ತೆರಳಬೇಕಾದರೆ ಗುರುತು ಚೀಟಿ ತೋರಿಸಬೇಕು ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version