Home ಕರಾವಳಿ ಮಂಗಳೂರು | ಆ್ಯಂಬುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕನನ್ನು ಬಂಧಿಸಿದ ಪೊಲೀಸರು

ಮಂಗಳೂರು | ಆ್ಯಂಬುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕನನ್ನು ಬಂಧಿಸಿದ ಪೊಲೀಸರು

ಮಂಗಳೂರು : ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟು ಕೊಡದೆ ಕಾರು ಚಾಲಕನೊಬ್ಬ ಅಮಾನವೀಯತೆ ಮೆರೆದಿದ್ದು, ಸದ್ಯ ಕಾರು ಚಾಲಕನಿಗೆ ಪೊಲೀಸರು ಠಾಣೆಯ ದಾರಿ ತೋರಿಸಿದ್ದಾರೆ.

ಜು. 19ರ ಸೋಮವಾರ ಸಂಜೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಆಂಬುಲೆನ್ಸ್ ಮುಖಾಂತರ ಸಾಗಿಸುವ ಸಂದರ್ಭ ರಸ್ತೆಯಲ್ಲಿ ಕುಂಪಲದ ಚರಣ್ (31) ಎಂಬಾತ ದಾರಿ ಬಿಡದೆ ಅಮಾನೀಯವಾಗಿ ವರ್ತಿಸಿ ಆ್ಯಂಬುಲೆನ್ಸ್ ಚಾಲಕನಿಗೆ ತೊಂದರೆ ನೀಡಿದ್ದಾನೆ. ರಸ್ತೆಯಲ್ಲಿ ಇತರ ವಾಹನಗಳು ಬದಿಗೆ ಸರಿದು ಆ್ಯಂಬುಲೆನ್ಸ್ ಗೆ ದಾರಿ ಮಾಡಿ ಕೊಡುತ್ತಿದ್ದರೂ, ಇರ್ಟಿಗಾ KA19 MJ 8924 ಕಾರಿನ ಚಾಲಕ ಚರಣ್ ಅಡ್ಡಾದಿಡ್ದಿಯಾಗಿ ಚಲಿಸಿ, ಆಂಬ್ಯುಲೆನ್ಸ್ ನ ಮುಂದೆ ಮತ್ತಷ್ಟು ವೇಗವಾಗಿ ಸಾಗಿದ್ದಾನೆ. ಇದೆಲ್ಲವೂ ಆಂಬ್ಯುಲೆನ್ಸ್ ನಲ್ಲಿದ್ದವರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು

ಜು. 20ರ ಮಂಗಳವಾರ ಸಂಚಾರ ದಕ್ಷಿಣ ಪೊಲೀಸ್ ಠಾಣಾ ಪೊಲೀಸರು ಕಾರು ಸಮೇತ ಚಾಲಕನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯ ದಾರಿ ತೋರಿಸಿದ್ದು, ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

Join Whatsapp
Exit mobile version