ಮಂಗಳೂರಿನ ‘ಸಮೋಸ ಅಜ್ಜ’ ನಿಧನ

Prasthutha|

ಮಂಗಳೂರು: ಸುಮಾರು 44 ವರ್ಷಗಳಿಂದ ಸೇಂಟ್ ಅಲೋಶಿಯಸ್ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮೋಸ ಮಾರಾಟ ಮಾಡುತ್ತಿದ್ದ ‘ಸಮೋಸ ಅಜ್ಜ’ ನಿಧನರಾಗಿದ್ದಾರೆ.

- Advertisement -

ಸಮೋಸ ಅಜ್ಜ ಎಂದು ಖ್ಯಾತಿ ಪಡೆದ ಮುದೆಯಪ್ಪ ಮಾಳಗಿ (88) ಮೃತರು. ಬಾಗಲಕೋಟೆ ಮೂಲದ ಇವರು ಈಗ ಮಂಗಳೂರಿನ ಕಾವೂರಿನಲ್ಲಿ ನೆಲೆಸಿದ್ದಾರೆ.

ಊಟದ ಸಮಯದಲ್ಲಿ ಸಮೋಸ ಮಾರುತ್ತಿದ್ದರಿಂದ ವಿದ್ಯಾರ್ಥಿಗಳು ಈ ಹೆಸರು ಇಟ್ಟಿದ್ದಾರೆ. ರಾಷ್ಟ್ರನಾಯಕ ಅಣ್ಣಾ ಹಜಾರೆಯನ್ನು ಹೋಲುವ ಕಾರಣದಿಂದ ವಿದ್ಯಾರ್ಥಿಗಳಿಂದ “ಅಣ್ಣ ಅಜ್ಜ” ಎಂದು ಕೂಡ ಕರೆಯುತ್ತಾರೆ. ಅವರು ಗಾಂಧಿ ಟೋಪಿ, ಕನ್ನಡಕ ಮತ್ತು ಬಿಳಿ ಜುಬ್ಬಾ-ಧೋತಿ ಧರಿಸುತ್ತಿದ್ದರು.

- Advertisement -


ಅವರು ಸಮೋಸದ ಜೊತೆ ಚಿಕ್ಕಿ, ಕಡಲೆಕಾಯಿ, ಬರ್ಫಿ ಮತ್ತು ಜಿಲಿಬಿಗಳನ್ನು ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳು ವಿಶೇಷವಾಗಿ ಊಟದ ಸಮಯದಲ್ಲಿ ಅವರ ಸುತ್ತಲೂ ಗುಂಪುಗೂಡುತ್ತಾರೆ.
ಮಾಳಗಿ ಅವರು 44 ವರ್ಷಗಳ ಹಿಂದೆ ಬಾದಾಮಿ ತಾಲೂಕಿನಿಂದ ಮಂಗಳೂರಿಗೆ ಬಂದಿದ್ದರು. ಅವರು ಮಂಗಳೂರಿಗೆ ಬಂದ ಕೂಡಲೇ ಸಮೋಸಾಗಳನ್ನು ಮಾರಾಟ ಮಾಡುವ ಈ ವ್ಯವಹಾರವನ್ನು ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ.



Join Whatsapp
Exit mobile version