Home ಟಾಪ್ ಸುದ್ದಿಗಳು ಮಂಗಳೂರು: ಕುತ್ತಾರ್ ಮದನಿ ನಗರದಲ್ಲಿ ನಾಳೆ ಮಹಿಳೆಯರಿಗೆ ಮೆಹೆಂದಿ ಸ್ಪರ್ಧೆ

ಮಂಗಳೂರು: ಕುತ್ತಾರ್ ಮದನಿ ನಗರದಲ್ಲಿ ನಾಳೆ ಮಹಿಳೆಯರಿಗೆ ಮೆಹೆಂದಿ ಸ್ಪರ್ಧೆ

ಮಂಗಳೂರು: ನಗರದ ಪ್ರಸಿದ್ಧ ಬ್ಯೂಟಿ ಸಲೂನ್ ಆಯಿಷಾಸ್ ಮೇಕೋವರ್ಸ್ ಮತ್ತು ಹೋಟೆಲ್ ರೋಯಲ್ ಗೆಝ್ಬೋ ಇವರ ಸಹಯೋಗದಲ್ಲಿ ನಾಳೆ ದಿನಾಂಕ 30.10.2022 ನೇ ಭಾನುವಾರ ಮಹಿಳೆಯರಿಗೆ ಮೆಹಂದಿ ಸ್ಪರ್ಧೆ ನಡೆಯಲಿದೆ.

ಆಯಿಷಾಸ್ ಮೇಕೋವರ್ಸ್ ಬ್ಯೂಟಿ ಸಲೂನ್ ಮತ್ತು ರೋಯಲ್ ಗೆಝ್ಬೊ ಇದರ ಜಂಟಿ ಆಯೋಜಕತ್ವದಲ್ಲಿ ಮೆಹಂದಿ ಸ್ಪರ್ಧೆ ನಡೆಯಲಿದ್ದು, ನೂರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಈಗಾಗಲೇ ಸ್ಪರ್ಧೆಗೆ ರಿಜಿಸ್ಟರ್ ಮಾಡಿದ್ದು, ಭಾಹವಹಿಸುವ ನಿರೀಕ್ಷೆಯಿದೆ.

ಮೆಹಂದಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಆಯಿಷಾಸ್ ಮೇಕೋವರ್ಸ್ ಬ್ಯೂಟಿ ಸಲೂನ್ ಮುಖ್ಯಸ್ಥೆ ಆಯಿಶಾ ಮಂಗಳೂರು, ಮರ್ಸಿ ವೀಣ ಡಿಸೋಜ ಹಾಗೂ ಸುಹಾನಾ ಮೆಕೋವರ್ಸ್ ಅಕಾಡಮಿ ನಿರ್ವಾಹಕರೂ ಭಾಗಿಯಾಗಲಿದ್ದಾರೆ . ಬ್ಯಾರಿ ಝುಲ್ಪಿ ಹಾಗೂ ಮಿಸ್ರಿಯಾ ಮೈಸೂರು ( ಮಿಸ್ರಿಯಾಸ್ ಹೆನ್ನಾ) ಆಯೋಜಕರ ಬಳಗದಲ್ಲಿದ್ದಾರೆ

Join Whatsapp
Exit mobile version