ಮಂಗಳೂರು: ತಲೆನೋವು  ಉಲ್ಬಣಗೊಂಡು ಯುವತಿ ಮೃತ್ಯು

Prasthutha|

ಬಂಟ್ವಾಳ: ತಲೆನೋವು ಉಲ್ಬಣಗೊಂಡು ಯುವತಿಯೊಬ್ಬಳು  ಮೃತಪಟ್ಟ ಘಟನೆ ತಾಲೂಕಿನ ಮಂಚಿಯಲ್ಲಿ ನಡೆದಿದೆ.

- Advertisement -

ಮಂಚಿ ಗ್ರಾಮದ ಮಣ್ಣಗುಳಿ ನಿವಾಸಿ ರತಿ ಕುಲಾಲ್ ಅವರ ಮಗಳು ಭವ್ಯಾ (20) ಮೃತ ಯುವತಿ. ಕೆಲ ದಿನಗಳಿಂದ ಕಾಣಿಸಿಕೊಂಡಿದ್ದ ತಲೆನೋವಿಗೆ ಸ್ಥಳೀಯ ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಕಳೆದೆರಡು ದಿನಗಳಿಂದ ತಲೆ ನೋವು ಜಾಸ್ತಿಯಾಗಿ ಆಗಾಗ ವಾಂತಿ ಮಾಡಲು ಪ್ರಾರಂಭಿಸಿದಾಗ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ಮನೆಯವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸುತ್ತಿರುವ ದಾರಿ ಮಧ್ಯೆ ಭವ್ಯಾ ಮೃತಪಟ್ಟಿದ್ದಾಳೆ.

ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಎಸ್.ಐ ಹರೀಶ್ ಪೋಸ್ಟ್ ಮಾರ್ಟಂ  ರಿಪೋರ್ಟ್ ಬಳಿಕ ಸಾವಿನ ಕಾರಣ ತಿಳಿಯಬಹುದು ಎಂದು ತಿಳಿಸಿದ್ದಾರೆ.

Join Whatsapp
Exit mobile version