ಮಂಗಳೂರು:ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಭರ್ತಿಯಾಗಲಿರುವ ಸ್ಥಾನಗಳಿಗೆ ಮೀಸಲಿರಿಸಿದ ಕೋಟಾದಡಿ ವಾರ್ಡ್ ಸಮಿತಿಗಳನ್ನು ರಚಿಸಲು ಇದೇ ನವೆಂಬರ್ 21ರ ಸಂಜೆ 5.30 ವರೆಗೆ ಅರ್ಜಿ ಅವಧಿಯನ್ನು ವಿಸ್ತರಿಸಲಾಗಿದೆ.
ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆಯ ವಲಯ ಕಚೇರಿಗಳಾದ ಸುರತ್ಕಲ್, ಕದ್ರಿ ಮಲ್ಲಿಕಟ್ಟೆ, ಹಾಗೂ ಪಾಲಿಕೆಯ ಕೇಂದ್ರ ಕಚೇರಿ ಲಾಲ್ ಬಾಗ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.