Home ಟಾಪ್ ಸುದ್ದಿಗಳು ಹತ್ತು ದಿವಸಗಳ ಒಳಗಾಗಿ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ: ಸಚಿವ ಅಶ್ವತ್ಥ ನಾರಾಯಣ್

ಹತ್ತು ದಿವಸಗಳ ಒಳಗಾಗಿ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ: ಸಚಿವ ಅಶ್ವತ್ಥ ನಾರಾಯಣ್

ಬೆಳಗಾವಿ: ಹತ್ತು ದಿವಸಗಳ ಒಳಗಾಗಿ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ತಿಳಿಸಿದರು.


ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್, ಫಲಿತಾಂಶ ವಿಳಂಬದಿಂದಾಗಿ ವಿದ್ಯಾರ್ಥಿಗಳಿಗೆ ತನ್ನ ಹಿಂದಿನ ವರ್ಷದ ಫಲಿತಾಂಶ ತಿಳಿಯದೆ ಮುಂದಿನ ವರ್ಷಕ್ಕಾಗಿ ಸ್ಕಾಲರ್ ಶಿಪ್’ಗೆ ಅರ್ಜಿ ಸಲ್ಲಿಸಲು ಗೊಂದಲ ಉಂಟಾಗಿದೆ. ಅದೇ ರೀತಿ ಹಾಸ್ಟೆಲ್’ಗಳಲ್ಲಿ ಗೊಂದಲ ಮುಂತಾದ ವಿಚಾರಗಳ ಬಗ್ಗೆ ಸದನದಲ್ಲಿ ವಿವರಿಸಿ ಆದಷ್ಟು ಬೇಗನೇ ಫಲಿತಾಂಶ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.


“ಎ” ಗ್ರೇಡ್ ನಲ್ಲಿದ್ದ ಮಂಗಳೂರು ವಿವಿ ಈಗ “ಬಿ” ಗ್ರೇಡ್ ಗೆ ಬಂದು ನಿಂತಿದ್ದು, ಹೀಗೆಯೇ ಮುಂದುವರಿದರೆ ಮುಂದೆ “ಸಿ” ಗ್ರೇಡ್ ಗೆ ಬಂದು ತಲುಪಬಹುದು. ಆದುದರಿಂದ ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಫಲಿತಾಂಶ ವಿಳಂಬಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ್, ಮುಂದಿನ ಹತ್ತು ದಿನಗಳ ಒಳಗಾಗಿ ಫಲಿತಾಂಶ ಬಿಡುಗಡೆ ಮಾಡುತ್ತೇವೆಂದು ಯು.ಟಿ.ಖಾದರ್ ರವರಿಗೆ ಭರವಸೆ ನೀಡಿದರು.

Join Whatsapp
Exit mobile version