ಮಂಗಳೂರು: ಪ್ರಧಾನಿ ಆಗಮನದ ನೆಪದಲ್ಲಿ ಅಲೆಮಾರಿಗಳ ಸ್ಥಳಾಂತರ, ವ್ಯಾಪಕ ಆಕ್ರೋಶ

Prasthutha|

 ಮಂಗಳೂರು: ಸೆಪ್ಟೆಂಬರ್ 2 ರಂದು ಪ್ರಧಾನಿ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ  ಕಾರ್ಯಕ್ರಮ  ನಡೆಯಲಿರುವ ಸ್ಥಳದ  ಸಮೀಪದಲ್ಲಿ ಟೆಂಟ್ ಗಳಲ್ಲಿ ವಾಸವಗಿದ್ದ ಅಲೆಮಾರಿಗಳನ್ನು ಬೇರೆಡೆಗೆ ಕಳುಹಿಸಲಾಗಿದೆ  ಎಂದು ತಿಳಿದು ಬಂದಿದೆ.

- Advertisement -

ಎಂಟು ವರ್ಷಗಳಿಂದ ಇಲ್ಲಿ ವಾಸಿಸುತ್ತ  ಬಸವ (ಎತ್ತು)ನ ಜೊತೆ ವಾದ್ಯ ಊದುತ್ತ ಮನೆಮನೆಗೆ ತೆರಳುವವರನ್ನು ಪೊಲೀಸರು ಏಕಾಏಕಿ ಸ್ಥಳಾಂತಗೊಳಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ ನಾವು ಎಂಟು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, 30 ಮಂದಿ ಇದ್ದೇವೆ. ಏಕಾಏಕಿ ಪೊಲೀಸರು  ಬಂದು ಮೋದಿ ಬರುವಾಗ ಟೆಂಟ್ ಗಳು ಕಾಣಬಾರದು ಎಂದು  ನಮ್ಮ ಟೆಂಟ್ ಗಳನ್ನು ತೆಗೆಯುವಂತೆ ತಿಳಿಸಿದ್ದಾರೆ. ಇದೀಗ ನಾವು ಸಮೀಪದಲ್ಲೇ ಮತ್ತೊಂದು ಜಾಗದಲ್ಲಿ ಇದ್ದೇವೆ ಎಂದು ಸಂತ್ರಸ್ತ ಶೇಷಯ್ಯ ಎಂಬವರು ದೂರಿದ್ದಾರೆ.

- Advertisement -

ಬಡವರ ಗುಡಿಸಲು ಕಾಣದಂತೆ ಈ ರೀತಿ ಮಾಡಲಾಗಿದೆ. ಸರ್ಕಾರಕ್ಕೆ ಬಡವರೆಂದರೆ ಅಲರ್ಜಿ ಎಂದು ನೆಟ್ಟಿಗರು ಟೀಕಾಪ್ರಹಾರ ನಡೆಸಿದ್ದಾರೆ.

Join Whatsapp
Exit mobile version