ಮಂಗಳೂರು: ಆಮ್ ಆದ್ಮಿ ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೆ. ಸಂತೋಷ್ ಕಾಮತ್’ರವರು ಇಂದು ತಮ್ಮ ನಾಮಪತ್ರವನ್ನು ಕ್ಷೇತ್ರದ ರಿಟರ್ನಿಂಗ್ ಆಫೀಸರ್ ಕೆಂಪೇಗೌಡರಿಗೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ಮಂಗಳಾದೇವಿ ದೇವಳದಲ್ಲಿ ಕುಟುಂಬಿಕರು, ಪಕ್ಷದ ಮುಖಂಡರು ಹಾಗು ಅಭಿಮಾನಿಗಳ ಜತೆಗೂಡಿ ಪೂಜೆ ಸಲ್ಲಿಸಿ ಬಳ್ಳಾಲ್ ಬಾಗ್’ನಿಂದ ಮಹಾನಗರಪಾಲಿಕೆಯ ಚುನಾವಣಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ನಾಮಪತ್ರ ಸಲ್ಲಿಸಲಾಯಿತು.