Home ಟಾಪ್ ಸುದ್ದಿಗಳು ಮಂಗಳೂರು: SDTU ಆಟೋ ಚಾಲಕರ ಯೂನಿಯನ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಮಂಗಳೂರು: SDTU ಆಟೋ ಚಾಲಕರ ಯೂನಿಯನ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಮಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ಕಚ್ಚಿ ಆಟೋ ಪಾರ್ಕ್ ಬಂದರ್ ನಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಸಲಾಯಿತು.

ಆಟೋ ಯೂನಿಯನ್ ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ ದ್ವಜಾರೋಹಣಗೈದರು, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂದರ್ ಪೊಲೀಸ್ ಠಾಣೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಚಿತ್ತರಂಜನ್ ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಪೂರ್ವಿಕರು ಸ್ವತಂತ್ರ ದೇಶಕ್ಕಾಗಿ ಹೋರಾಟ ನಡೆಸಿದ ಫಲ ಶ್ರೇಷ್ಠ ಸಂವಿಧಾನ ಅಸ್ಥಿತ್ವಕ್ಕೆ ಬರಲು ಸಾಧ್ಯವಾಯಿತು ಈ ನಿಟ್ಟಿನಲ್ಲಿ ನಾಗರಿಕ ಸಮಾಜ ಸಂವಿಧಾನ ಆಶಯಕ್ಕೆ ಪೂರಕವಾಗಿ ಸಮಾಜ ಕಟ್ಟುವ ಜವಾಬ್ದಾರಿ ನಮ್ಮದಾಗಬೇಕು ಎಂದರು. SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಮಾತನಾಡಿ ಗಣರಾಜ್ಯ ದೇಶದ ಶ್ರೇಷ್ಠ ಸಂವಿಧಾನದ ಮೂಲ ಆಶಯಗಳಾದ ಸ್ವತಂತ್ರ, ಸಮಾನತೆ, ಬಾತೃತ್ವ, ಸಾರ್ವಜಭೌಮತೆಯನ್ನು ಉಳಿಸಿ ಬೆಳೆಸಲು ಮತ್ತು ಕಟ್ಟ ಕಡೆಯ ನಾಗರಿಕನು ಅನುಭವಿಸಲು, ಪರಸ್ಪರ ಶತ್ರುಗಳಿಲ್ಲದ, ಧರ್ಮ ವಿದ್ವೇಷ ಇಲ್ಲದ ನಾಡನ್ನು ಕಟ್ಟಲು ಗಣರಾಜ್ಯ ದಿನಾಚರಣೆ ಪೂರಕವಾಗಿರಲಿ ಎಂದರು.


ಶೆರೀಫ್ ಕುತ್ತಾರ್ ಸಂವಿಧಾನದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ವಾಚಿಸಿದರು.


ಪೊಲೀಸ್ ಸಿಬ್ಬಂದಿ ಲೋಕೇಶ್,
SDTU ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಕಣ್ಣೂರ್, ಫಿರೋಜ್ ಪಡುಬಿದ್ರೆ, ಸಂಶು ಪಲ್ಲಮಜಲ್ ಸದಾಫ್ ಬೆಂಗರೆ, ಅರ್ಷದ್ ಕುದ್ರೋಳಿ, ರಜಾಕ್ ಬಂದರ್ ಮತ್ತಿತರರು ಉಪಸ್ಥಿತರಿದ್ದರು

Join Whatsapp
Exit mobile version