Home ಟಾಪ್ ಸುದ್ದಿಗಳು ಮಂಗಳೂರು: ಸ್ವಾತಂತ್ರ್ಯೋತ್ಸವದಂದೇ ಭಗವಾಧ್ವಜ ಹಾರಿಸಿದ ಸಂಘಪರಿವಾರ

ಮಂಗಳೂರು: ಸ್ವಾತಂತ್ರ್ಯೋತ್ಸವದಂದೇ ಭಗವಾಧ್ವಜ ಹಾರಿಸಿದ ಸಂಘಪರಿವಾರ

ಮಂಗಳೂರು: ದೇಶಾದ್ಯಂತ ಇಂದು 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ದಿನ ಇಡೀ ದೇಶದಲ್ಲಿ ತಿರಂಗಾ ಧ್ವಜ ಹಾರಿಸಿದರೆ, ಮಂಗಳೂರಿನ ಸುರತ್ಕಲ್ ಬಸ್ ಸ್ಟಾಂಡ್‌ನಲ್ಲಿ ಸಂಘಪರಿವಾರದ ಕಾರ್ಯಕರ್ತರು ಭಗವಾಧ್ವಜ ಹಾರಿಸಿದ್ದಾರೆ. ಇದು ಭಾರತದ ಸ್ವಾಂತಂತ್ರ್ಯೋತ್ಸವಕ್ಕೆ ಮತ್ತು ತಿರಂಗಾ ಧ್ವಜಕ್ಕೆ ಮಾಡಿರುವ ಅಪಮಾನ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಧಾನಿ ಮೋದಿ ಅವರು ತಿರಂಗಾ ಹಾರಿಸುವಂತೆ ಕರೆಕೊಟ್ಟಿರುವಾಗ ಬಿಜೆಪಿಯ ಭಾಗವೇ ಆಗಿರುವ ಸಂಘಪರಿವಾರದ ಕಾರ್ಯಕರ್ತರು ಸುರತ್ಕಲ್‌ನಲ್ಲಿ ಭಗವಾಧ್ವಜ ಹಾರಿಸಿರುವುದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.

ಸ್ಥಳೀಯರ ಪ್ರಕಾರ ನಿನ್ನೆ ರಾತ್ರಿ 12 ಗಂಟೆಗೆ ಸುರತ್ಕಲ್ ಬಸ್ ಸ್ಟಾಂಡ್‌ನಲ್ಲಿ ಸಂಘಪರಿವಾರದ ಕಾರ್ಯಕರ್ತರು ಭಗವಾಧ್ವಜವನ್ನು ಇಟ್ಟು ಧ್ವಜಾರೋಹಣ ನೆರವೇರಿಸಿದ್ದಾರೆ. ಮಧ್ಯರಾತ್ರಿ ನಡೆದ ಈ ದೇಶದ್ರೋಹದ ಕೃತ್ಯಕ್ಕೆ ಪೊಲೀಸರು ಭದ್ರತೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Join Whatsapp
Exit mobile version