Home ಕರಾವಳಿ ಮಂಗಳೂರು: ಪಿಯು ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

ಮಂಗಳೂರು: ಪಿಯು ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

ಮಂಗಳೂರು: ಪಿಯು ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಘಟನೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುರುವಾರ ಸಂಜೆ 4-30ರ ಸುಮಾರಿಗೆ ಮಂಗಳೂರು ಪೂರ್ವ ಪೊಲೀಸ್ ಠಾಣ ವ್ಯಾಪ್ತಿಯ ನಂತೂರು ಪದವು ಬಳಿ ನಿಟ್ಟೆ ಪಿಯು ಕಾಲೇಜಿನ ಪ್ರಥಮ ಪಿಯುನಲ್ಲಿ  ವ್ಯಾಸಂಗ ಮಾಡುತ್ತಿರುವ 17 ವರ್ಷದ ವಿದ್ಯಾರ್ಥಿಗೆ ಮಂಗಳೂರಿನ ಪದವು ಪಿಯು ಕಾಲೇಜಿನಲ್ಲಿ   ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತಂತೆ ಹಲ್ಲೆ ಮಾಡಿದ ಪದವು ಪಿಯು ಕಾಲೇಜಿನ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಠಾಣೆಗೆ ಕರೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಚಾಕುವಿನಿಂದ ಇರಿದ ಮತ್ತು ಇರಿತಕ್ಕೊಳಗಾದ ವಿದ್ಯಾರ್ಥಿಗಳು ಅಪ್ರಾಪ್ತರಾಗಿದ್ದಾರೆ.

  ಬಾಲಕರನ್ನು ಪೋಷಕರೊಂದಿಗೆ ವಿಚಾರಿಸಿ ಕಾನೂನು ಕ್ರಮ ಕೈಗೊಂಡು, ಕಾನೂನು ಸಂಘರ್ಷಕ್ಕೊಳಾಗದ ಬಾಲಕರ ವಿರುದ್ಧ   ಬಾಲ ನ್ಯಾಯ ಮಂಡಳಿ ರವರಿಗೆ ಸೂಕ್ತ ವರದಿಯನ್ನು ಸಲ್ಲಿಸಲಾಗಿದೆ.

Join Whatsapp
Exit mobile version