Home ಟಾಪ್ ಸುದ್ದಿಗಳು ಮಂಗಳೂರಿನಿಂದ ಕುಷ್ಟಗಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ: 11 ಮಂದಿಗೆ ಗಾಯ

ಮಂಗಳೂರಿನಿಂದ ಕುಷ್ಟಗಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ: 11 ಮಂದಿಗೆ ಗಾಯ

ಶಿರಸಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ರಸ್ತೆ ಸಮೀಪದ ಗದ್ದೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹನುಮಂತಿ ಬಳಿ ನಡೆದಿದೆ.

ಬೆಳಗ್ಗಿನ ಮೂರು ಗಂಟೆಯ ಸುಮಾರಿಗೆ ಈ ಬಸ್ ಪಲ್ಟಿಯಾಗಿದೆ. ಬಸ್ ನಲ್ಲಿ 11 ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದು ಮಂಗಳೂರಿನಿಂದ ಕುಷ್ಟಗಿಗೆ ತೆರಳುವ ಬಸ್ ಆಗಿದ್ದು, ರಾತ್ರಿ 9 ಗಂಟೆಯ ಹೊತ್ತಿಗೆ ಮಂಗಳೂರು ಬಿಟ್ಟು 3 ಗಂಟೆಯ ಹೊತ್ತಿಗೆ ಶಿರಸಿ ಪ್ರವೇಶ ಮಾಡಿತ್ತು. ಅಲ್ಲಿ ಹನುಮಂತಿ ಎಂಬ ಭಾಗದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದೆ.

Join Whatsapp
Exit mobile version