Home ಟಾಪ್ ಸುದ್ದಿಗಳು ಮಂಗಳೂರು: ಕರ್ತವ್ಯದಲ್ಲೇ ಗುಪ್ತಚರ ಇಲಾಖೆ ಸಿಬ್ಬಂದಿಗೆ ಹೃದಯಾಘಾತ, ಸ್ಥಳದಲ್ಲೇ ಮೃತ್ಯು

ಮಂಗಳೂರು: ಕರ್ತವ್ಯದಲ್ಲೇ ಗುಪ್ತಚರ ಇಲಾಖೆ ಸಿಬ್ಬಂದಿಗೆ ಹೃದಯಾಘಾತ, ಸ್ಥಳದಲ್ಲೇ ಮೃತ್ಯು

ಮಂಗಳೂರು: ಕರ್ತವ್ಯದಲ್ಲಿ ಇದ್ದಾಗಲೇ ಗುಪ್ತಚರ ಇಲಾಖೆ ಸಿಬ್ಬಂದಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಉರ್ವ ಮಾರಿಗುಡಿ ನಿವಾಸಿ ರಾಜೇಶ್ ಬಿ.ಯು (45) ಮೃತ ಸಿಬ್ಬಂದಿ.

ಇಂದು(ಸೆ.16) ಮಧ್ಯಾಹ್ನ ವೇಳೆ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ರೆಸ್ಟ್ ರೂಮಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಂತೆ ಎ ಎಸ್.ಐ ರಾಜೇಶ್ ಬಿ ಕುಸಿದು ಬಿದ್ದಿದ್ದಾರೆ. 1993 ನೇ ಬ್ಯಾಚ್ನ ಪೂಲೀಸ್ ಸಿಬ್ಬಂದಿಯಾಗಿದ್ದ ರಾಜೇಶ್, ಸುರತ್ಕಲ್ ಹಾಗೂ ಪಣಂಬೂರು ಪೊಲೀಸ್ ಠಾಣೆಯ ಸಿಬ್ಬಂದಿಯೂ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Join Whatsapp
Exit mobile version