Home ಕರಾವಳಿ ಮಂಗಳೂರು: ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ

ಮಂಗಳೂರು: ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ

ಮಂಗಳೂರು: ಇಲ್ಲಿನ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಟಿಪ್ಪು ಸುಲ್ತಾನ್ ನಗರದ ನಿವಾಸಿ ರಿಯಾಝ್ ಎಂಬವರ ಪುತ್ರಿ ಖತೀಜಾ ರೀನಾ(16) ಎಂದು ಗುರುತಿಸಲಾಗಿದೆ.


ಇಂದು ಬೆಳಿಗ್ಗೆ(ಫೆ.5) 8:30ರ ಸುಮಾರಿಗೆ ಬಾಲಕಿಯ ಮೃತದೇಹ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಬಂದರ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version