Home ಕರಾವಳಿ ಮಂಗಳೂರು: ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ಸಾವು

ಮಂಗಳೂರು: ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ಸಾವು

ಮಂಗಳೂರು: ಕಳೆದ 11 ವರ್ಷಗಳಿಂದ ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಶ್ವಾನ ಗೀತಾ ಸಾವನ್ನಪ್ಪಿದೆ.


2011 ಮೇ 21ರಂದು ಜನಿಸಿದ ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಈ ಹೆಣ್ಣು ಶ್ವಾನ 2011 ಆಗಸ್ಟ್ 19 ರಂದು ಪೊಲೀಸ್ ಪಡೆಗೆ ಸೇರ್ಪಡೆಯಾಗಿತ್ತು.


ಬೆಂಗಳೂರಿನ ಸಿಎಆರ್ ಸೌತ್ ನಲ್ಲಿ 11 ತಿಂಗಳ ಕಾಲ ತರಬೇತಿ ಪಡೆದಿದ್ದ ಗೀತಾ ಕರ್ತವ್ಯಕ್ಕೆ ಸೇರಿ 11 ವರ್ಷಗಳ ಕಾಲ ಇಲಾಖೆಗೆ ಸೇವೆ ಸಲ್ಲಿಸಿತ್ತು.


ಇಲಾಖೆಯಲ್ಲಿ 11 ವರ್ಷಗಳ ಸೇವಾವಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೀತಾಮಂಗಳೂರಿಗೆ ವಿವಿಐಪಿ ಭೇಟಿ ನೀಡಿದಾಗ ಬಂದೋಬಸ್ತ್ ತಂಡದ ಭಾಗವಾಗಿ ಕಾರ್ಯ ನಿರ್ವಹಿಸಿತ್ತು. ಹರೀಶ್ ಎಂಬ ಪೊಲೀಸ್ ಸಿಬ್ಬಂದಿ ಗೀತಾ ಹೆಸರಿನ ಈ ಶ್ವಾನದ ಹ್ಯಾಂಡ್ಲರ್ ಆಗಿದ್ದರು.

Join Whatsapp
Exit mobile version