ಮಂಗಳೂರು: ಕದ್ರಿ ಉದ್ಯಾನದ ಬಳಿ ಇದ್ದ ಉತ್ತರ ಕರ್ನಾಟಕದ ಜೋಡಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಅನೈತಿಕ ಪೊಲೀಸ್’ಗಿರಿ ನಡೆಸಿದ ನಾಲ್ವರು ಸಂಘ ಪರಿವಾರದ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ್ದಾರೆ.
ಕಡಬದ ಅಶ್ವಿತ್, ಚಿಕ್ಕಮಗಳೂರಿನ ಶರತ್, ಅಳಪೆಯ ಧೀರಜ್, ಬಂಟ್ವಾಳದ ಅಭಿಜಿತ್ ಬಂಧಿತರು ಎಂದು ತಿಳಿದುಬಂದಿದೆ. ಈ ನಾಲ್ವರು ಸಂಘ ಪರಿವಾರದ ಕಾರ್ಯಕರ್ತರಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬುಧವಾರ ಸಂಜೆ ಉತ್ತರ ಕರ್ನಾಟಕ ಭಾಗದ ಹುಡುಗ ಮತ್ತು ಹುಡುಗಿ ಕದ್ರಿ ಪಾರ್ಕ್’ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಈ ನಾಲ್ವರು ಜೋಡಿಯ ಬಳಿ ಬಂದು ಅವರ ಊರು, ಧರ್ಮ ವಿಚಾರಿಸಿ ಹಲ್ಲೆ ನಡೆಸಿತ್ತು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಜೋಡಿಯ ವಿಚಾರಣೆ ನಡೆಸಿ ಅವರು ನೀಡಿದ ಹೇಳಿಕೆ ದಾಖಲಿಸಿ ಆರೋಪಿಗಳನ್ನು ಬಂಧಿಸಿದೆ.
ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.