Home ಟಾಪ್ ಸುದ್ದಿಗಳು ಮಂಗಳೂರು: ಎದುರುಪದವು ನೂತನ ಪ್ರವಾಸಿ ಮಹಿಳಾ ನಮಾಝ್ ಕೊಠಡಿ ಶಂಕುಸ್ಥಾಪನೆ

ಮಂಗಳೂರು: ಎದುರುಪದವು ನೂತನ ಪ್ರವಾಸಿ ಮಹಿಳಾ ನಮಾಝ್ ಕೊಠಡಿ ಶಂಕುಸ್ಥಾಪನೆ

ಮಂಗಳೂರು: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ ವತಿಯಿಂದನೂತನ ಪ್ರವಾಸಿ ಮಹಿಳಾ ನಮಾಝ್ ಕೊಠಡಿ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ಮಸೀದಿ ಆವರಣದಲ್ಲಿ ನೆರವೇರಿತು.

ಶಂಕುಸ್ಥಾನೆಯನ್ನು ಮಿತ್ತಬೈಲ್ ಜಬ್ಬಾರ್ ಉಸ್ತಾದ್ ರವರ ಸುಪುತ್ರ ಇರ್ಷಾದ್ ಹುಸೈನ್ ದಾರಿಮಿ ಅಲ್ ಜಝಾರಿ ಮಿತ್ತಬೈಲ್ ನೆರವೇರಿಸಿದರು.

ಇಲ್ಲಿನ ಮಸೀದಿಯು ಪಿಲಿಕುಳ ಪ್ರವಾಸಿ ತಾಣದ ಪಕ್ಕದಲ್ಲಿದ್ದು ಅನೇಕ ಪ್ರವಾಸಿಗರು ನಮಾಝ್ ನಿರ್ವಹಣೆಗೆ ಬರುತ್ತಿದ್ದಾರೆ. ಮಹಿಳಾ ಪ್ರವಾಸಿಗರು ಕೂಡ ಬರುತ್ತಿದ್ದು, ಅವರಿಗಾಗಿ ನಿರ್ಮಾಣವಾಗುವ ಮಹಿಳಾ ನಮಾಝ್ ಕೊಠಡಿ‌ ನಿರ್ಮಾಣವಾಗುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಇದರ ಮುಅಲ್ಲಿಂ ಜಾಬೀರ್ ಜೌಹರಿ ಕಲ್ಲಡ್ಕ, ಹಿರಿಯರಾದ ಹಾಜಿ ಹನೀಫ್ ಮೌಲವಿ, ಮಸೀದಿ ಅಧ್ಯಕ್ಷ ಮೈಯ್ಯದ್ದಿ, ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್, ಉಪಾಧ್ಯಕ್ಷ ಎ.ಪಿ ಇಕ್ಬಾಲ್, ಮಹಮ್ಮದ್ ಮುಕ್ರಿ, ಮಹಮ್ಮದ್ ಶರೀಫ್, ಹಸನಬ್ಬ, ಮಹಮ್ಮದ್ ಶಕೂರ್, ರಝಾಕ್ ಮಂದಾರ, ಮನ್ಸೂರ್, ಮಹಮ್ಮದ್ ಆರೀಫ್, ಅಬ್ದುಲ್ ಖಾದರ್, ಅಬ್ದುಲ್ ಖಾದರ್ ಎ.ಕೆ, ಶೇಖ್ ಅಬ್ದುಲ್ ಖಾದರ್, ಅಥಾವುಲ್ಲ, ಎ.ಪಿ ಹಸನಬ್ಬ, ಫಾರೂಕ್ ಅಝಂ, ಹಮೀದ್ ಕೂಳೂರು, ಅಹಮ್ಮದ್ ಬಾವ, ಮಹಮ್ಮದ್ ನೌಶಾದ್, ಅಲ್ತಾಫ್, ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version