Home ಟಾಪ್ ಸುದ್ದಿಗಳು ಮಂಗಳೂರು: ಮುಕ್ಕಾ ಗ್ರೂಪ್ ಅಫ್ ಕಂಪನಿ ಹ್ಯಾರಿಸ್ ಮನೆಗೆ ಇಡಿ ದಾಳಿ: 17ಕೋಟಿ ಮೌಲ್ಯದ...

ಮಂಗಳೂರು: ಮುಕ್ಕಾ ಗ್ರೂಪ್ ಅಫ್ ಕಂಪನಿ ಹ್ಯಾರಿಸ್ ಮನೆಗೆ ಇಡಿ ದಾಳಿ: 17ಕೋಟಿ ಮೌಲ್ಯದ ಸ್ಥಿರಾಸ್ತಿ ವಶ

ಮಂಗಳೂರು: ಮುಕ್ಕಾ ಗ್ರೂಪ್ ಆಫ್ ಕಂಪನೀಸ್‌ನ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ)ಯು ವಶಪಡಿಸಿಕೊಂಡಿದೆ.

ವಶಪಡಿಸಿಕೊಂಡ ಆಸ್ತಿಗಳಲ್ಲಿ ಮಂಗಳೂರಿನಲ್ಲಿರುವ ಎರಡು ವಸತಿ ಮನೆಗಳು ಮತ್ತು ಒಂದು ಕೈಗಾರಿಕಾ ಪ್ಲಾಟ್ ಸೇರಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅಧಿಕಾರಿಗಳು ಫೆಮಾ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನ ನಿವಾಸಿ ಮುಕ್ಕಾ ಗ್ರೂಪ್ ಆಫ್ ಕಂಪನೀಸ್‌ನ ಹ್ಯಾರಿಸ್ ಅವರು ನಿಬಂಧನೆಗಳನ್ನು ಉಲ್ಲಂಘಿಸಿ ಸ್ಥಿರ ಆಸ್ತಿ, ವ್ಯಾಪಾರ ಘಟಕಗಳನ್ನು ಸಂಪಾದಿಸಿದ್ದಾರೆ ಮತ್ತು ವಿದೇಶೀ ವಿನಿಮಯ ವಹಿವಾಟು ನಡೆಸಿದ್ದಾರೆ ಎಂಬ ಆರೋಪದ ಮೇಲೆ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

Join Whatsapp
Exit mobile version