ಮೂಡುಬಿದಿರೆ: ವಿದ್ಯಾಗಿರಿ ಜಂಕ್ಷನ್ ಬಳಿ ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಪಿಕಪ್ ವಾಹನ ಚಾಲಕ ಮೂಡುಬಿದಿರೆ ಲಾಡಿಯ ಸಂದೇಶ ಶೆಟ್ಟಿಯನ್ನು ಪೊಲೀಸರು ವಿಚಾರಿಸಿದಾಗ ಜಾನುವಾರು ಸಾಗಾಟದ ಕುರಿತಾದ ಯಾವುದೇ ಪರವಾನಿಗೆ ಇರಲಿಲ್ಲ. ಅಲಂಗಾರ್ ನ ನವೀನ ಅವರ ಫಾರ್ಮ್ ನಿಂದ ಕಡಿಮೆ ದರದಲ್ಲಿ ಗೋವು ಖರೀದಿಸಿ ಮಾಂಸ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಬಳಿಕ ವಾಹನ ಚಾಲಕ ಸಂದೇಶ ಶೆಟ್ಟಿ ಹಾಗೂ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್ ಐ ಸಿದ್ದಪ್ಪ, ಎಎಸ್ ಐ ಕುಮಾರ್ ಮತ್ತು ಸಿಬ್ಬಂದಿ ವಾಹನವನ್ನು ತಡೆದು ತಪಾಸಣೆಗೊಳಪಡಿಸಿದಾಗ ಮೂರು ಹಸುಗಳು ಪತ್ತೆಯಾಗಿತ್ತು.