Home ಟಾಪ್ ಸುದ್ದಿಗಳು ಮಂಗಳೂರು: ಮೇ 13ರಿಂದ ಜೂ.30ರವರೆಗೆ ಸಿಟಿ ಗೋಲ್ಡ್ ನಲ್ಲಿ ಬ್ರೈಡಲ್ ಫೆಸ್ಟ್

ಮಂಗಳೂರು: ಮೇ 13ರಿಂದ ಜೂ.30ರವರೆಗೆ ಸಿಟಿ ಗೋಲ್ಡ್ ನಲ್ಲಿ ಬ್ರೈಡಲ್ ಫೆಸ್ಟ್

ಮಂಗಳೂರು: ಮೇ 13 ರಿಂದ ಜೂನ್ 30ರವರೆಗೆ  ಕಂಕನಾಡಿಯಲ್ಲಿರುವ ಸಿಟಿ ಗೋಲ್ಡ್ ಡೈಮಂಡ್ ನಲ್ಲಿ ‘ಬ್ರೈಡ್ ಇನ್ ಯು’ ಎಂಬ ‘ಬ್ರೈಡಲ್ ಫೆಸ್ಟ್’ ನಡೆಯಲಿದೆ.

ಬ್ರೈಡ್ ಇನ್ ಯು ಪ್ರಯುಕ್ತ ದೇಶ ವಿದೇಶಗಳ ವಿವಿಧ ರೀತಿಯ ಚಿನ್ನ ಹಾಗು ವಜ್ರಭರಣಗಳು ಪ್ರದರ್ಶನವನ್ನು ಮೇ13ರ ಸಂಜೆ 4:30ಕ್ಕೆ ಉದ್ಘಾಟಿಸಲಾಗುವುದು.

‘ಮಿಯೋರಾ’ ಎಂಬ ಬ್ರೈಡಲ್ ಕಲೆಕ್ಷನನ್ನು ಒದ್ನಿ ಇದರ ಮಾಲಕಿ ಶರ್ವತ್ ಸಾಜಿದ್ ಉದ್ಘಾಟಿಸಲಿದ್ದಾರೆ. ‘ರೊಹಿ’ ಎಂಬ ಬ್ರೈಡಲ್ ಕಲೆಕ್ಷನನ್ನು ಪೊಸ್ಟೋಡಾಂಟಿಕ್ಸ್ ಮತ್ತು ಇಂಪ್ಲಾಂಟಾಲಜಿಸ್ಟ್ ಆಗಿರುವ ಡಾ.ರಶ್ಮಿತಾ ರತ್ನಾಕರ್ ರಾಜ್ ಉದ್ಘಾಟಿಸಲಿದ್ದಾರೆ.

‘ಎಲಾರಿಸ್’ ಎಂಬ ಬ್ರೈಡಲ್ ಕಲೆಕ್ಷನನ್ನು ಲೇಖಕಿ ಆಯಿಶಾ ಫರ್ಝಾನಾ ಯು.ಟಿ. ಉದ್ಘಾಟಿಸಲಿದ್ದಾರೆ. ‘ದಿಯಾನ್’ ಎಂಬ ಬ್ರೈಡಲ್ ಕಲೆಕ್ಷನನ್ನು ಎಎನ್ ಮೇಕಪ್ ಇದರ ಮಾಲಕಿ ಆಶಿಕಾ ನೈನಾಝ್ ಉದ್ಘಾಟಿಸಲಿದ್ದಾರೆ. ‘ತಮಿಝ್’ ಎಂಬ ಬ್ರೈಡಲ್ ಕಲೆಕ್ಷನನ್ನು ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದಾರೆ. ‘ಒನೊರಾ’ ಎಂಬ ಬ್ರೈಡಲ್ ಕಲೆಕ್ಷನನ್ನು ನರ ರೋಗ ತಜ್ಞೆ ಡಾ.ಸಲ್ಮಾ ಸುಹಾನಾ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Join Whatsapp
Exit mobile version